HomeFresh Newsಮೂಡುಬಿದಿರೆ:ಅಂಬ್ಯುಲೆನ್ಸ್ - ಆಟೋ ಡಿಕ್ಕಿ : ಚಾಲಕ ಮೃತ್ಯು

ಮೂಡುಬಿದಿರೆ:ಅಂಬ್ಯುಲೆನ್ಸ್ – ಆಟೋ ಡಿಕ್ಕಿ : ಚಾಲಕ ಮೃತ್ಯು

ಮೂಡುಬಿದಿರೆ : ಮಂಗಳೂರು- ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಮೂಡುಬಿದಿರೆ ಬನ್ನಡ್ಕ ಎಂಬಲ್ಲಿ ಅಂಬ್ಯುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಜಾನ್ ಕೊರೆಯಾ ಸ್ಥಳದಲ್ಲೇ ಮೃತಪಟ್ಟ ದುಘ೯ಟನೆ ಭಾನುವಾರ ನಡೆದಿದೆ.

ಬನ್ನಡ್ಕ ಮಠದಲ್ಲಿ ನಡೆಯುತ್ತಿದ್ದ ಸಮಾರಂಭವೊಂದಕ್ಕೆ ಪ್ರಯಾಣಿಕರನ್ನು ಬಿಟ್ಟು ಆಟೋ ರಿಕ್ಷಾವನ್ನು ಹಿಂದಕ್ಕೆ (ರಿವರ್ಸ್) ತೆಗೆಯುತ್ತಿದ್ದ ಸಂದರ್ಭದಲ್ಲಿ, ಮೂಡುಬಿದಿರೆ ಕಡೆಯಿಂದ ಕಾರ್ಕಳಕ್ಕೆ ಅತೀ ವೇಗವಾಗಿ ತೆರಳುತ್ತಿದ್ದ ಅಂಬ್ಯುಲೆನ್ಸ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಆಟೋ ರಿಕ್ಷಾದ ಮೇಲ್ಬಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅಂಬ್ಯುಲೆನ್ಸ್‌ನ ಮುಂಭಾಗ ಕೂಡ ಜಖಂಗೊಂಡಿದೆ. ಕಳೆದ ಐದು ತಿಂಗಳಲ್ಲಿ ಬನ್ನಡ್ಕ ವಲಯದ ಇದೇ ಪ್ರದೇಶದಲ್ಲಿ ಹಲವಾರು ಅಪಘಾತಗಳು ಸಂಭವಿಸಿದ್ದು ಮೂರು ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments