ಶ್ರೀಕುರು ಅಂಬಾ ಅಯ್ಯಪ್ಪ ಭಕ್ತ ವೃಂದ : 18ನೇ ವರ್ಷದ ಶಬರಿಮಲೆ ಯಾತ್ರೆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ

ಕೋಡಿಕಲ್‍ನ ಕಲ್ಬಾವಿ ಬನದ ಶ್ರೀ ಶ್ರೀಕುರು ಅಂಬಾ ಅಯ್ಯಪ್ಪ ಭಕ್ತವೃಂದದ 18ನೇ ವರ್ಷದ ಶಬರಿಮಾಲೆ ಯಾತ್ರೆಯ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಹಾಗೂ ಅಪ್ಪಸೇವೆ ಮತ್ತು ಕೆಂಡಸೇವೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಮೂಡಬಿದ್ರಿ ಶ್ರೀ ಅಯ್ಯಪ್ಪ ದೇವಸ್ಥಾನದ ಪ್ರಧಾನ ಆರ್ಚಕರಾದ ಗುರುಸ್ವಾಮಿ ಶಿವಾನಂದ ಶಾಂತಿ ಇವರ ದಿವ್ಯ ಹಸ್ತದಿಂದ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಇನ್ನು ಈ ಪ್ರಯುಕ್ತ ಗಣಹೋಮ, ಭಜನಾ ಕಾರ್ಯಕ್ರಮ, ಪ್ರತಿಷ್ಠೆ, ಉಷಾ ಪೂಜೆ, ನಂತರ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆಯು ನಡೆಯಿತು. ಶ್ರೀ ಶ್ರೀಕುರು ಅಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಶೋಭಾಯಾತ್ರೆ ಮತ್ತು ಪಡಿಪೂಜೆ, ಪುಷ್ಪಾಭಿಷೇಕ ನೆರವೇರಿತು. ರಾತ್ರಿ ಬ್ರಹ್ಮಶ್ರೀ ವೇದಮೂರ್ತಿ ದೇರೆಬೈಲು ವಿಠಲದಾಸ ತಂತ್ರಿವರ್ಯರ ಆಶೀರ್ವಚನದೊಂದಿಗೆ ಅಯ್ಯಪ್ಪ ಸ್ವಾಮಿ ವೃತಧಾರಿಗಳಿಂದ ಅಪ್ಪಸೇವೆ, ದೀಪರಾಧನೆಯೂ ನಡೆಯಿತು. ಇದೇ ವೇಳೆ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟವು ಪ್ರದರ್ಶನಗೊಂಡಿತು. ಜನವರಿ 2 ರಂದು ಪೂರ್ವಾಹ್ನ ಅಯ್ಯಪ್ಪ ಸ್ವಾಮಿ ವೃತಧಾರಿಗಳಿಂದ ಕೆಂಡಸೇವೆ ಹಾಗೂ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಭಕ್ತವೃಂದದವರು ಮತ್ತು ಅಯ್ಯಪ್ಪ ಮಾಲಾಧಾರಿಗಳು ಪಾಲ್ಗೊಂಡಿದ್ದರು.
