HomeFresh Newsಶಾಸಕ ರಾಜೇಶ್ ನಾಯ್ಕ್ ಅವರಿಂದ ನಾಮಪತ್ರ ಸಲ್ಲಿಕೆ : 35 ಕಿ.ಮಿ. ನಡೆದು ಬಂದ...

ಶಾಸಕ ರಾಜೇಶ್ ನಾಯ್ಕ್ ಅವರಿಂದ ನಾಮಪತ್ರ ಸಲ್ಲಿಕೆ : 35 ಕಿ.ಮಿ. ನಡೆದು ಬಂದ ದಂಪತಿ

ಬಂಟ್ವಾಳ: ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ನಾಮಪತ್ರ ಸಲ್ಲಿಸಲು ಪೆÇಳಲಿ ಕ್ಷೇತ್ರದಿಂದ ಪಾದಾಯಾತ್ರೆಯ ಮೂಲಕ ಆಗಮಿಸುವ ಸುದ್ದಿ ತಿಳಿದ ದಂಪತಿ ತಮ್ಮ ಮನೆಯಿಂದ ಸುಮಾರು 35 ಕಿ.ಮಿ.ದೂರದವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿ ಪಕ್ಷದ ಅಭ್ಯರ್ಥಿಗೆ ಶುಭಾಶಯ ಕೋರಿದ ಘಟನೆ ಬಂಟ್ವಾಳದಲ್ಲಿ ನಡೆಯಿತು.

ಬಡಗಕಜೆಕಾರು ಗ್ರಾ.ಪಂ.ಮಾಜಿ ಸದಸ್ಯ ಗಂಗಾಧರ ಪೂಜಾರಿ ತನ್ನ ಪತ್ನಿ ಚಂದ್ರಾವತಿ ಅವರ ಜೊತೆಗೂಡಿ ಕಜೆಕಾರಿನ ಮಹಾದೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಿದರು. ಪುಂಜಾಲಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬಂದು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರನ್ನು ಭೇಟಿಯಾದರು. ರಾಜೇಶ್ ನಾಯ್ಕ್ ಅವರು ಭ್ರಷ್ಟಾಚಾರ ರಹಿತ ಆಡಳಿತವನ್ನು ತನ್ನ ಶಾಸಕತ್ವದ ಸಮಯದಲ್ಲಿ ನೀಡಿದ್ದು, ಹಲವು ಬಾರಿ ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳನ್ನು ಅರಿತು ಪರಿಹರಿಸುವ ಪ್ರಯತ್ನ ಮಾಡಿದ್ದಾರೆ. ಅವರನ್ನು ಬೆಂಬಲಿಸುವ ಸಲುವಾಗಿ ಕಾಲ್ನಡಿಗೆಯ ಮೂಲಕ ಆಗಮಿಸಿದ್ದೇವೆ ಎಂದು ತಿಳಿಸಿದರು.

comedy premier league season 4
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments