HomeFresh Newsಮೂಡುಬಿದರೆ : ಧೂಳು ಬರುವ ಹಾಗೆ ವಾಹನ ಚಾಲಾಯಿಸಬೇಡ ಎಂದಾತನ ಕೊಲೆ

ಮೂಡುಬಿದರೆ : ಧೂಳು ಬರುವ ಹಾಗೆ ವಾಹನ ಚಾಲಾಯಿಸಬೇಡ ಎಂದಾತನ ಕೊಲೆ

ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ ನಿಧಾನವಾಗಿ ಹೋಗೆಂದು ಹೇಳಿದ ವ್ಯಕ್ತಿಗೆ ಟಿಪ್ಪರ್ ಚಾಲಕ ರಾಡ್ ನಿಂದ ಹೊಡೆದು, ಟಿಪ್ಪರ್ ಚಲಾಯಿಸಿ ಕೊಲೆ ನಡೆಸಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಹತ್ಯೆಗೀಡಾದ ವ್ಯಕ್ತಿ. ಪಯಾಜ್ ಶುಕ್ರವಾರ ಕೋಟೆಬಾಗಿಲು ಮಸೀದಿಗೆ ನಮಾಝ್‍ಗೆ ತೆರಳುವ ಸಂಧರ್ಭ ಕೋಟೆಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಹಾರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು ಹೋಗಿದ್ದಾನೆ. ಆಗ ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಫಯಾಝ್ ಅವರ ಮೇಲೆ ಧೂಳನ್ನು ಹಾರಿಸಿದ್ದಾನೆ.

ಕೋಪಗೊಂಡ ಫಯಾಝ್ ಅವರು ನಿಧಾನ ಹೋಗುವಂತೆ ಹೇಳಿದ್ದು, ಈ ಸಂದರ್ಭ ಇಬ್ಬರ ಮದ್ಯೆ ಮಾತಿನ ಚಕಾಮಕಿ ನಡೆದಿದೆ. ನಮಾಝ್ ಮುಗಿಸಿಕೊಂಡು ಹಿಂತಿರುವ ಸಂದರ್ಭದಲ್ಲಿಯೂ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು, ಈ ಸಂಧರ್ಭ ಫಯಾಝ್ ಅವರು ಟಿಪ್ಪರ್‍ನ ಮೆಟ್ಟಿಲು ಮೇಲೆ ಹೋಗಿ ಮಾತನಾಡಿದ್ದು ಆಗ ಹಾರೀಸ್ ಮಾರಾಕಾಸ್ತ್ರದಿಂದ ತಲೆ ಭಾಗಕ್ಕೆ ಹೊಡೆದು ಟಿಪ್ಪರನ್ನು ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸಿದ್ದಾನೆ.ಆಯತಪ್ಪಿ ಫಯಾಝ್ ಅವರು ರಸ್ತೆಗೆ ಬಿದ್ದಿದ್ದಾರೆ. ಬಿದ್ದ ಅವರ ಮೇಲೆಯೇ ಟಿಪ್ಪರನ್ನು ಹಾಯಿಸಿದ್ದಾನೆ. ರಾಡ್‍ನ ಏಟು ಮತ್ತು ಟಿಪ್ಪರ್‍ನ ಅಡಿಗೆ ಬಿದ್ದ ಫಯಾಝ್ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments