ಅರ್ಚಕರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಆಹಾರ ಸಾಮಾಗ್ರಿ ವಿತರಣೆ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿಯಲ್ಲಿ ಧಾರ್ಮಿಕ ಪರಿಷತ್ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ತಾಲೂಕಿನ ಎಲ್ಲಾ ಅರ್ಚಕರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ದಿನ ಬಳಕೆ ಸಾಮಗ್ರಿಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ರವರು ಧಾರ್ಮಿಕ ಪರಿಷತ್ ಇದರ ಬಹಳ ಮಹತ್ವಾಕಾಂಕ್ಷೆ ಯೋಜನೆ ರಾಜ್ಯದ ಎಲ್ಲಾ ಅರ್ಚಕರಿಗೆ ಈ ಕೊರೊನಾ ಸಂದರ್ಭದಲ್ಲಿ ನಾವು ಸಹಕಾರವನ್ನು ಕೊಡಬೇಕೆಂಬ ಕಳಕಳಿಯಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅದಕ್ಕಾಗಿ ತಾಲೂಕಿನ ಎಲ್ಲಾ ದೇವಸ್ಥಾನದ ಅರ್ಚಕ ವೃಂದದ ಪರವಾಗಿ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 112 ಸಿ.ದರ್ಜೆಯ ದೇವಸ್ಥಾನದ ಸಿಬ್ಬಂದಿಗಳಿಗೆ ಆಹಾರ ಕಿಟ್ಟನ್ನು ಕೊಡಬೇಕೆಂದು ಧಾರ್ಮಿಕ ಪರಿಷತ್ತಿನ ದೇವೇಂದ್ರ ಹೆಗ್ಡೆಯವರ ಪ್ರಯತ್ನದಿಂದ ಇದು ಸಾಧ್ಯವಾಯಿತು ಎಂದರು.ಕಾರ್ಯಕ್ರಮದಲ್ಲಿ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗೀಶ್ ಆಲಂಬಿಲ,ಕೊಕ್ಕಡ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕುಶಾಲಪ್ಪ ಪೂವಾಜೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Related Posts

Leave a Reply

Your email address will not be published.