ಉಜಿರೆಯಲ್ಲಿ ಮಾಹಿತಿಕಾರ್ಯಾಗಾರ : ‘ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಎಸ್.ಡಿ.ಎಂ ಸನ್ನದ್ಧ’

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿರಾಷ್ಟ್ರೀಯ ಶಿಕ್ಷಣ ನೀತಿಯ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿಎಸ್.ಡಿ.ಎಂಕಾಲೇಜಿನ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳು ತೀವ್ರಗೊಂಡಿವೆಎಂದುಎಸ್.ಡಿ.ಎಂಕಾಲೇಜಿನ ಪ್ರಾಚಾರ್ಯರಾದಡಾ.ಸತೀಶ್ಚಂದ್ರ ತಿಳಿಸಿದರು.

ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದಎಸ್.ಡಿ.ಎಂ ಸ್ನಾತಕೋತ್ತರಕೇಂದ್ರದಲ್ಲಿಪದವಿಪೂರ್ವ, ಪದವಿ ಹಂತದಅಧ್ಯಾಪಕರು, ಪ್ರಸಕ್ತ ಸಾಲಿಗೆ ಪ್ರವೇಶಾತಿ ಪಡೆದವಿದ್ಯಾರ್ಥಿಗಳು ಮತ್ತುಅವರಪೋಷಕರಿಗಾಗಿ ಮಂಗಳವಾರ ಆಯೋಜಿಸಲಾದಮಾಹಿತಿಕಾರ್ಯಾಗಾರಕ್ಕೆ ಚಾಲನೆ ನೀಡುವಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಲವು ದಶಕಗಳಿಂದ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಶೈಕ್ಷಣಿಕ ವ್ಯವಸ್ಥೆಯೊಳಗೆ ಸಮಗ್ರ ಬದಲಾವಣೆತರುವ ಮಹತ್ವಾಕಾಂಕ್ಷೆಯೊಂದಿಗೆಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ರೂಪಿಸಿ ಅನುಷ್ಠಾನಕ್ಕೆ ವೇದಿಕೆ ಸಿದ್ಧಪಡಿಸಿದೆ. ಭಾರತದ ಶೈಕ್ಷಣಿಕರಂಗಕ್ಕೆ ವಿಶ್ವಮಟ್ಟದ ಮನ್ನಣೆ ಲಭಿಸುವುದಕ್ಕೆ ಈ ನೀತಿ ಸಹಾಯಕವಾಗಲಿದೆ. ವಿದ್ಯಾರ್ಥಿಗಳ ಜ್ಞಾನ, ಪ್ರಯೋಗಶೀಲ ಸಾಮಥ್ರ್ಯ ಮತ್ತುಕೌಶಲ್ಯಪೂರ್ಣಅಭಿವ್ಯಕ್ತಿಗೆ ಅವಕಾಶ ನೀಡುವ ವಾತಾವರಣ ಈ ನೀತಿಯ ಮೂಲಕ ಸೃಷ್ಟಿಯಾಗಲಿದೆಎಂದುಅವರು ಹೇಳಿದರು.
ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿವಿದ್ಯಾರ್ಥಿಗಳ ಸರ್ವತೋಮುಖಬೆಳವಣಿಗೆಗೆ ಪೂರಕವಾಗುವರೀತಿಯಲ್ಲಿಶಿಕ್ಷಣವನ್ನು ಮರುರೂಪಿಸುವ ದೃಷ್ಟಿಯಿಂದರಾಷ್ಟ್ರೀಯ ಶಿಕ್ಷಣ ನೀತಿಯುಮಹತ್ವಪೂರ್ಣ ಹೆಜ್ಜೆಯಾಗಿದೆ. ಶೈಕ್ಷಣಿಕ ಸಾಮಥ್ರ್ಯವ್ಯಕ್ತಿಗತಕೌಶಲ್ಯದ ವಿಸ್ತರಣೆಯ ಬಹುಮುಖ್ಯ ಸಂಪನ್ಮೂಲ. ಇಂಥಚಿಕಿತ್ಸಕದೃಷ್ಟಿಕೋನ ನೂತನ ನೀತಿಯಮೌಲಿಕ ಅಂಶ ಎಂದು ವಿಶ್ಲೇಷಿಸಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಡಾ.ಮಾರುತಿಕೆ.ಆರ್‍ಅವರುರಾಷ್ಟ್ರೀಯ ಶಿಕ್ಷಣ ನೀತಿಯಕುರಿತು ಸಮಗ್ರ ವಿವರಗಳನ್ನು ಪ್ರಸ್ತುತಪಡಿಸಿದರು. ಪ್ರವೇಶಾತಿ ಸ್ವರೂಪ, ವಿವಿಧ ಹಂತಗಳ ಸೆಮಿಸ್ಟರ್‍ಅಧ್ಯಯನದ ಸಂದರ್ಭದವಿದ್ಯಾರ್ಥಿಸ್ನೇಹಿ ಶೈಕ್ಷಣಿಕ ಅವಕಾಶಗಳು, ಪರಿಷ್ಕøತಕ್ರೆಡಿಟ್‍ಆದ್ಯತೆಗಳನ್ನು ವಿಶ್ಲೇಷಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದಎಸ್.ಡಿ.ಎಂ ಸ್ನಾತಕೋತ್ತರಕೇಂದ್ರದಡೀನ್‍ಡಾ.ಪಿ. ವಿಶ್ವನಾಥ್ ಹಳೆಯ ಶಿಕ್ಷಣ ಪದ್ಧತಿ ಮತ್ತು ನೂತನರಾಷ್ಟ್ರೀಯ ಶಿಕ್ಷಣ ನೀತಿಯ ನಡುವಿನ ವ್ಯತ್ಯಾಸಗಳನ್ನು ಗುರುತಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಮುನ್ನಡೆಗೆನೂತನ ನೀತಿಯು ಸಹಕಾರಿಯಾಗಲಿರುವ ಬಗೆಯನ್ನು ವಿವರಿಸಿದರು. ಎಸ್.ಡಿ.ಎಂ ಸ್ನಾತಕೋತ್ತರಕೇಂದ್ರದ ಸಂಯೋಜನಾಧಿಕಾರಿ ಸುವೀರ್‍ಜೈನ್‍ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Posts

Leave a Reply

Your email address will not be published.