ಉಡುಪಿಯ ಪೆರ್ಣಂಕಿಲದಲ್ಲಿ ಬೋನಿಗೆ ಬಿದ್ದ ಚಿರತೆ
ಪೆರ್ಣಂಕಿಲದಲ್ಲಿ ಗ್ರಾಮಸ್ಥರನ್ನು ಬಹು ದಿನಗಳಿಂದ ಕಾಡುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಗ್ರಾಮದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕಳೆದ ರಾತ್ರಿ ಪೆರ್ಣಂಕಿಲದ ಗುಂಡುಪಾದೆ ಎಂಬಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದೆ. ಚಿರತೆಯನ್ನು ಸೆರೆ ಹಿಡಿಯಲು ಗುಂಡುಪಾದೆಯ ಅಶೋಕ್ ನಾಯಕ್ ಎಂಬವರ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಕಳೆದ ರಾತ್ರಿ ಚಿರತೆ ಇದರೊಳಗೆ ಸೆರೆಯಾಗಿದೆ. ಇಂದು ಬೆಳಗ್ಗೆ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕೊಂಡೊಯ್ದರು. ಇದರೊಂದಿಗೆ ಪೆರ್ಣಂಕಿಲ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.