ಉಡುಪಿ ಜಿಲ್ಲೆಯ ಮೂವರು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪ್ರದಾನ
ಅಗ್ನಿ ಶಾಮಕ ದಳ ಹಾಗೂ ತುರ್ತು ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯ ಮೂವರು ಸಿಬ್ಬಂದಿಗಳಿಗೆ ಕರ್ನಾಟಕ ಸರಕಾರದಿಂದ ನೀಡುವ ಚಿನ್ನದ ಪದಕವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನೀಡಿ ಗೌರವಿಸಿದ್ದಾರೆ.
ಇಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಪದಕ ಪ್ರಧಾನ ಕಾರ್ಯಕ್ರಮದಲ್ಲಿ ಅಗ್ನಿ ಶಾಮಕ ದಳ ಜಿಲ್ಲಾ ಮುಖ್ಯ ಅಧಿಕಾರಿ ಹೆಚ್ ಎಂ ವಸಂತ್ ಕುಮಾರ್, ಅಶ್ವಿನ್ ಸನಿಲ್ ಹಾಗೂ ಎಂ. ಕೇಶವ್ ಇವರಿಗೆ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದುಕೊಂಡರು. ಅಗ್ನಿ ಶಾಮಕದಳ ತುರ್ತು ಸೇವ ಇಲಾಖೆಯಲ್ಲಿ ನಾಗರಿಕರ ಪ್ರಾಣ ರಕ್ಷಣೆ ಹಾಗೂ ಅಸ್ತಿ ಸಂರಕ್ಷಣಾ ಕಾರ್ಯಚರಣೆಯಲ್ಲಿ ಉತ್ತಮ ಸೇವೆಯನ್ನು ಗುರುತಿಸಿ ಮುಖ್ಯ ಮಂತ್ರಿಗಳ ಪದಕ ಪ್ರಧಾನಕ್ಕೆ ಅಯ್ಕೆಯಾಗಿದ್ದಾರೆ.