ಎರ್ಮಾಳ್: ಸ್ಕೂಟರ್‌ಗೆ ಕಾರು ಡಿಕ್ಕಿ: ಸ್ಕೂಟರ್ ಸವಾರನಿಗೆ ಗಂಭೀರ ಗಾಯ
ಎರ್ಮಾಳು ಬುದ್ದಗಿ ಪೆಟ್ರೋಲ್ ಬಂಕ್ ಬಳಿಯ ರಸ್ತೆ ಡೈವರ್ಷನ್ ಬಳಿ ಅತೀ ವೇಗವಾಗಿ ಮುನ್ನುಗ್ಗಿ ಬಂದ ಕಾರೊಂದು ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರನ ತಲೆಗೆ ಗಂಭೀರ ಗಾಯಗಳಾಗಿದ್ದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಗೊಂಡವರನ್ನು ಅದಮಾರಿನ ಕೆಮುಂಡೇಲು ನಿವಾಸಿ ಡ್ಯಾನಿಶ್ ಡಿಸೋಜ (50) ಎಂದು ಗುರುತಿಸಲಾಗಿದೆ. ಇವರು ಅದಮಾರು ಶಿಕ್ಷಣ ಸಂಸ್ಥೆಯ ವಾಹನದ ಚಾಲಕನಾಗಿದ್ದು, ಬೆಳಿಗ್ಗೆ ಪಡುಬಿದ್ರಿಗೆ ದಿನಬಳಕೆ ಸಾಮಗ್ರಿ ಖರೀದಿಸಿ, ಮನೆಗೆ ಹೋಗುತ್ತಿದ್ದ ವೇಳೆ ಎರ್ಮಾಳ್ ಪೆಟ್ರೋಲ್ ಬಂಕ್ ಬಳಿಯ ಹೆದ್ದಾರಿ ತಿರುವಿನಲ್ಲಿ ಕಿನ್ನಿಗೋಳಿಯಿಂದ ಉಡುಪಿ ಕಡೆಗೆ ವೇಗವಾಗಿ ಹೋಗುತ್ತಿದ್ದ ರಿಡ್ಜ್ ಕಾರು ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್ ನ ಹಿಂಭಾಗಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗದ ಗಾಜಿಗೆ ಹಾರಿದ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ. ಸ್ಕೂಟರ್ ನಲ್ಲಿದ್ದ ಚಿಕ್ಕನ್ ಫೀಸ್ ಗಳು ರಸ್ತೆಯಲ್ಲೆಡೆ ಚೆಲ್ಲಿದ್ದು ಅಪಘಾತದ ತೀವೃತೆಯನ್ನು ಸಾರುತ್ತಿತ್ತು. ಅಪಘಾತ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.