ಎಸ್ ಎಸ್ ಎಲ್ ಸಿ ಫಲಿತಾಂಶ: ಆಳ್ವಾಸ್ ಪ್ರೌಢಶಾಲೆಗೆ ಶೇ.100 ಫಲಿತಾಂಶ
ಮೂಡುಬಿದಿರೆ : ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಆಳ್ವಾಸ್ ಪ್ರೌಢಶಾಲೆಯು ಶೇ.100 ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿ ಗಣೇಶ್ ಹನುಮಂತಪ್ಪ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾನೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಳ್ವಾಸ್ ಪ್ರೌಢಶಾಲೆಯಿಂದ 499 ಮಂದಿ ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. 13 ಮಂದಿ ವಿದ್ಯಾರ್ಥಿಗಳು 620ಕ್ಕಿಂತ ಅಧಿಕ,115 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ, 37 ವಿದ್ಯಾರ್ಥಿಗಳು ಶೇ.95ಕ್ಕಿಂತ ಅಧಿಕ, 88 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಹಾಗೂ 66 ವಿದ್ಯಾರ್ಥಿಗಳು ಶೇ.85 ಅಧಿಕ ಅಂಕಗಳನ್ನು ಪಡೆದಿದ್ದಾರೆ. ಒರ್ವ ವಿದ್ಯಾರ್ಥಿ ಎಲ್ಲ ಆರು ವಿಷಯಗಳಲ್ಲಿ 100 ಅಂಕ, 6 ವಿದ್ಯಾರ್ಥಿಗಳು 5 ವಿಷಯಗಳಲ್ಲಿ, 19 ವಿದ್ಯಾರ್ಥಿಗಳು 4 ವಿಷಯಗಳಲ್ಲಿ, 27 ವಿದ್ಯಾರ್ಥಿಗಳು ವಿದ್ಯಾರ್ಥಿಗಳು 3 ವಿಷಯಗಳಲ್ಲಿ. 54 ವಿದ್ಯಾರ್ಥಿಗಳು ಎರಡು ವಿಷಯಗಳಲ್ಲಿ ಹಗೂ 82 ವಿದ್ಯಾರ್ಥಿಗಳು 1 ವಿಷಯದಲ್ಲಿ 100ಕ್ಕೆ 100 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಅಂಬಿಕಾ ವಿ.ಪಿ(623), ಪುಷ್ಪರಾಜ್ ಉದಯ ಕುಮಾರ್ ಪಾಟೀಲ್(623), ಸದಾಶಿವ್ ಎಸ್.(623), ಸತೀಶ್ ಗಿರೀಶ್ ಕುದರೆ(623), ಶಿವರಾಜ್ ತರಿವಾಲ್(623), ದಿಶಾ ಶಂಕರ್(622), ಪವನ್ ಕುಮಾರ್ ಪಾಟೀಲ್(621), ಪ್ರಿಯಾಂಕ ಮಲ್ಲಪ್ಪ(621), ಸಾಗರ್ ಗುರಪ್ಪ(621), ಶ್ರದ್ಧಾ ಬಸವರಾಜ್(621), ಅದರ್ಶ್ ಎಂ.ನಾಯರಿ(621), ಪ್ರಜೂಷಾ ಮಹಾವೀರ(621), ವೈಷ್ಣವಿ ವಿ.ಭಟ್(621) ಅವರು 620 ಅಧಿಕ ಅಂಕಗಗಳನ್ನು ಪಡೆದಿದ್ದಾರೆ ಎಂದು ಮೋಹನ ಆಳ್ವ ತಿಳಿಸಿದ್ದಾರೆ.
ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಸದಾಕತ್, ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿಗಾರ್, ಆಳ್ವಾಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವಿಜಯ ಟಿ., ಪ್ರಶಾಂತ್, ಸಿಬಿಎಸ್ಎಸ್ ವಿಭಾಗದ ಮುಖ್ಯ ಶಿಕ್ಷಕ ಮಹಮ್ಮದ್ ಶಾಪಿ, ಪಿ.ಆರ್.ಒ ಪದ್ಮನಾಭ ಶೆಣೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.