ಕರಾವಳಿಯಲ್ಲಿ ಸರಳ ನಾಗರ ಪಂಚಮಿ ಆಚರಣೆ : ದೇವಸ್ಥಾನದಲ್ಲಿ ಬೆರಳಣಿಕೆಯ ಭಕ್ತಾಧಿಗಳು

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ನಾಗರಪಂಚಮಿಯನ್ನು ಇಂದು ಕರಾವಳಿಯಾದ್ಯಂತ ಆಚರಿಸಲಾಗುತ್ತಿದೆ.

ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಆಚರಣೆ ಸರಳವಾಗಿದ್ದು, ನಗರದ ಪ್ರಮುಖ ನಾಗ ಸನ್ನಿಧಿಯಾದ ಕುಡುಪು ಸೇರಿದಂತೆ ದೇವಸ್ಥಾನ ಗಳಲ್ಲಿ ವೈದಿಕ ವಿಧಿ ವಿಧಾನಗಳು, ವಿಶೇಷ ಪೂಜೆಯೊಂದಿಗೆ ನಾಗಾರಾಧನೆ ನಡೆಯುತ್ತಿದೆ. ವಿಶೇಷ ಸೇವೆಗಳಿಗೆ ಅವಕಾಶ ಇಲ್ಲವಾಗಿದ್ದು, ಭಕ್ತರು ತಮ್ಮ ಕುಟುಂಬದ ನಾಗಬನಗಳಲ್ಲಿ ಸೀಯಾಳಾಭಿಷೇಕ, ಹಾಲೆರೆಯುವ ಮೂಲಕ ಪೂಜೆ ಸಲ್ಲಿಸುತ್ತಿದ್ದಾರೆ.

ನಗರದ ಶರವು ದೇವಾಲಯದಲ್ಲಿ ಸರಕಾರದ ಮಾರ್ಗಸೂಚಿಯಂತೆ ನಾಗರಪಂಚಮಿ ಆಚರಿಸಲಾಯಿತು. ಜಿಲ್ಲೆಯ ವಿವಿಧ ದೇವಸ್ಥಾನದಲ್ಲಿ ಭಕ್ತಾಧಿಗಳು ಬೆರಳಣಿಕೆಯಲ್ಲಿದ್ದು, ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ನಾಗರಪಂಚಮಿ ಆಚರಿಸಿದರು.ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲಿ ಸಾರ್ವಜನಿಕರು ಗುಂಪು ಸೇರದೆ ನಿಯಮ ಪಾಲನೆಯೊಂದಿಗೆ ನಾಗರ ಪಂಚಮಿ ಸೇರಿದಂತೆ ಹಬ್ಬಗಳನ್ನು ಆಚರಿಸಬೇಕೆಂದು ಜಿಲ್ಲಾಡಳಿತ ಈಗಾಗಲೇ ಸೂಚನೆಯನ್ನು ನೀಡಿದೆ.

 

Related Posts

Leave a Reply

Your email address will not be published.