ಕುಂದಾಪುರ ಜೆಸಿಐ ಮತ್ತು ರೆಡ್‍ಕ್ರಾಸ್ ಸಂಸ್ಥೆ : ಬಡವರಿಗೆ ಊಟದ ವ್ಯವಸ್ಥೆ
ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಜೆ.ಸಿ.ಐ ಕುಂದಾಪುರ ಸಿಟಿ ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ಕುಂದಾಪುರ ಪರಿಸರದಲ್ಲಿ ಪ್ರತಿದಿನ ಸುಮಾರು 200 ಕ್ಕಿಂತಲೂ ಹೆಚ್ಚು ಕೊವೀಡ್ ವಾರಿಯರ್ಸ್, ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಊಟವನ್ನು ನೀಡುತಿದ್ದು ಇವರ ಈ ಕಾರ್ಯಕ್ಕೆ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕೂಡ ಹಲವು ದಿನಗಳ ಪ್ರಾಯೋಜಕತ್ವವನ್ನು ನೀಡಿದೆ.
ಕಳೆದ ಬಾರಿಯೂ ಕೂಡ ಲಾಕ ಡೌನ್ ಸಂದರ್ಭದಲ್ಲಿ ಸುಮಾರು 40ಕ್ಕಿಂತ ಹೆಚ್ಚು ದಿನಗಳಲ್ಲಿಯೂ ಊಟವನ್ನು ನೀಡಿ ಈಬಾರಿಯೂ ಕೂಡ ಕರೊನಾ ವಿರುದ್ಧ ಹೋರಾಟಕ್ಕೆ ನಿಂತಿದೆ.
ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ವಿಜಯ ಭಂಡಾರಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್ ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ ಶ್ರೀಧರ್ ಸುವರ್ಣ ಕಾರ್ಯದರ್ಶಿ ಗುರುರಾಜ್ ಕೊತ್ವಾಲ್, ಮಹೇಶ್ ಶೇಟ್, ಅಭಿಲಾಶ್, ಜೇಸಿರೇಟ್ ಅಧ್ಯಕ್ಷೆ ಡಾ ಸೋನಿ ಜೇಸಿರೇಟ್ ಕಾರ್ಯದರ್ಶಿ ಡಾ ಅಶ್ವತಿ ಉಪಸ್ಥಿತರಿದ್ದರು.