ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಾಗಿದೆ.ಆರೋಗ್ಯದಲ್ಲಿ ಏರುಪೇರಾದ ಕಾರಣ ಪುನೀತ್ ರಾಜ್ ಕುಮಾರ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಪುನೀತ್ ರಾಜ್ ಕುಮರ್ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಟನಿಗೆ ನಗರದ ವಿಕ್ರಂ
ಗುರುಪುರ ಕೈಕಂಬ; ಪ್ರವಾದಿ ನಿಂದನೆ ಹಾಗೂ ಮುಸ್ಲಿಂ ಸಮುದಾಯದ ಮೇಲಾಗುತ್ತಿರುವ ನಿರಂತರ ದೌರ್ಜನ್ಯದ ವಿರುದ್ಧ ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯದಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಎಂ. ಇಸ್ಹಾಕ್ ಕೌಸರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ನಿಮಗಿಂತಲೂ ಪ್ರವಾದಿಯನ್ನು ನಿಂದಿಸಿದ ಜನರು ಕಳೆದುಹೋಗಿದ್ದಾರೆ. ಅವರಲ್ಲಿ ಬಹಳಷ್ಟು ಜನರು ಪ್ರವಾದಿಯವರನ್ನು ಅರಿತಾಗ ಇಸ್ಲಾಂ ಸ್ವೀಕರಿಸಿದ ಚರಿತ್ರೆಯಿದೆ. ಪ್ರವಾದಿಯನ್ನು
ಮನೆಯಲ್ಲಿ ತಯಾರಿಸಿದ ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ ಹತ್ತು ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ನಡೆದಿದೆ. ಪಡ್ನೂರು ಕೊಡಂಗೆ ಸಾಂತಪ್ಪರವರ ಪುತ್ರ ರಾಘವ ರವರ ಮನೆಯಲ್ಲಿ ಈ ಘಟನೆ ನಡೆದಿದ್ದು ರಾಘವ, ಅವರ ತಾಯಿ ಹೊನ್ನಮ್ಮ, ಪತ್ನಿ ಲತಾ, ಪುತ್ರಿ ತೃಷಾ, ಸಹೋದರಿ ಬೇಬಿ, ಬಾವಂದಿರಾದ ದೇವಪ್ಪ, ಕೇಶವ, ರಾಘವರವರ ಸಹೋದರಿಯರ ಮಕ್ಕಳಾದ ಸುದೇಶ್, ಧನುಷ್ ಹಾಗೂ ಅರ್ಚನಾ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರು: ಧರ್ಮ ಸಮನ್ವಯ ಹಾಗೂ ಅಂತರ್ಧರ್ಮೀಯ ಸಂವಾದದ ಹರಿಕಾರ ವಂ. ಡಾ.ಜಾನ್ ಫೆರ್ನಾಂಡಿಸ್ (85) ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. 1936ರಲ್ಲಿ ಉದ್ಯಾವರದಲ್ಲಿ ಜನಿಸಿದ ಇವರು, 1963ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದರು. ಬಿಜೈ ಮತ್ತು ರೊಸಾರಿಯೊ ಧರ್ಮಕೇಂದ್ರಗಳಲ್ಲಿ ಸಹಾಯಕ ಗುರುಗಳಾಗಿ ಹಾಗೂ ಹೊಸಬೆಟ್ಟು (ಮೂಡುಬಿದಿರೆ), ಕಟಪಾಡಿ ಹಾಗೂ ಬೆಳ್ಮಣ್ ಚರ್ಚ್‌ಗಳಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ್ದರು.
ಪುತ್ತೂರು: ನಗರ ಕಾಂಗ್ರೆಸ್ ವತಿಯಿಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಎನ್95 ಮಾದರಿಯ ಮಾಸ್ಕನ್ನು ಪತ್ರಿಕಾಭವನದಲ್ಲಿ ವಿತರಿಸಲಾಯಿತು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾಸ್ಕ್‍ವಿತರಿಸಿ ಮಾತನಾಡಿ, ಕೊರೋನಾ ಸಂಕಷ್ಟ ಕಾಲದಲ್ಲಿ ಕೊರೋನಾ ವಾರಿಯರ್ಸ್ ಆಗಿ ಸಮಾಜದ ಜನರ ನಡುವೆ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಸರಕಾರ ಕೊಡುಗೆಗಳನ್ನು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಒತ್ತಾಯಿಸಿದರು. ಈ
ಕೊರೊನಾ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿರುವ ಸರ್ಕಾರ ಯಾಕೆ ಉಚಿತವಾಗಿ ಲಸಿಕೆ ನೀಡಲು ಮೀನಾಮೇಷ ಎಣಿಸುತ್ತಿದೆ. ಲಸಿಕೆ ಪಡೆದವರು ಯಾರೂ ಸತ್ತಿಲ್ಲ. ಲಸಿಕೆ ಸಿಗದೇ ಆದಂತಹಾ ಸಾವು ನೋವಿಗೆ ಬಿಜೆಪಿ ಸರ್ಕಾರ ನೇರ ಹೊಣೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಆರೋಪಿಸಿದ್ದಾರೆ. ಅವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಲಸಿಕೆಯನ್ನು ಪಡೆಯದ ಕಾರಣ ನಮ್ಮವರು ಸತ್ತಿದ್ದಾರೆ ಎಂದು ಹೇಳುವ ಮಂದಿ
ಕೊರೊನಾದಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಧ್ಯಮ ವರ್ಗ, ಹಿಂದುಳಿದ ವರ್ಗದವರು ಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಘೋಷಿಸಿರುವ ಅನುದಾನ ಯಾವುದಕ್ಕೂ ಸಾಕಾಗುವುದಿಲ್ಲ. ಕನಿಷ್ಠ ಹತ್ತು ಸಾವಿರ ಆದರೂ ಅನುದಾನವನ್ನು ಕಾರ್ಮಿಕರಿಗೆ, ಬಡವರಿಗೆ ನೀಡಬೇಕು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ವಿಶ್ವಾಸ್ ದಾಸ್ ಹೇಳಿದರು. ಅವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಕುಂದಾಪುರ: ತಾಲೂಕಿನಲ್ಲಿರುವ ವ್ಯಾಕ್ಸಿನ್ ಕೇಂದ್ರಗಳಲ್ಲಿ ಕೆಲ ಗೊಂದಲಗಳಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಯಾರಿಂದಲೂ ನಿಯಮ ಉಲ್ಲಂಘನೆಯಾಗದಂತೆ ಕುಂದಾಪುರ, ಕಾರ್ಕಳ ಹಾಗೂ ಮಲ್ಪೆಯ ವ್ಯಾಕ್ಸಿನ್ ಕೇಂದ್ರಗಳಿಗೆ ನೋಡಲ್ ಅಧಿಕಾರಿ ನೇಮಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿರುವ ವ್ಯಾಕ್ಸಿನ್ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಧ್ಯಮಗಳ ಜೊತೆ
ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿನ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಸರಕಾರಿ ಜಿಡಬ್ಲ್ಯುಎಲ್‍ಪಿ ಶಾಲೆ ಮಂಜೇಶ್ವರದಲ್ಲಿ ನಡೆಯಿತು. ಕೋವಿಡ್ ಮಾನದಂಡಗಳನ್ನು ಪಾಲಿಸಿ ಕೊಂಡು ಮಂಜೇಶ್ವರ ಗ್ರಾಮ ಪಂಚಾಯತು ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಲಾ ಪರಿಸರದಲ್ಲಿ ಗಿಡ ನೀಡುವುದರೊಂದಿಗೆ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ ಉದ್ಘಾಟಿಸಿದರು. ಈ ಸಂದರ್ಭ
ಲಾಕ್ ಡೌನ್‍ನಿಂದಾಗಿ ದುಡಿಮೆ ಇಲ್ಲದೇ ಹಲವು ಕುಟುಂಬಗಳು ಸಂಕಷ್ಟದಲ್ಲಿವೆ. ಹೀಗಾಗಿ ಸಂಕಷ್ಟದ ಕುಟುಂಬಗಳ ಹಸಿವು ನೀಗಿಸುವ ಕೆಲಸವನ್ನು ಸದ್ದಿಲದೇ ಮಾಡುತ್ತಿದೆ. ಉಡುಪಿಯ ಸ್ಪೀಡ್ ಡೆವಿಲ್ಸ್ ಎನ್ನುವ ಹೆಸರಿನ ಯುವಕರು ಸಂಕಷ್ಟದಲ್ಲಿ ಕುಟುಂಬಗಳ ಮನೆ ಮನೆಗೆ ತೆರಳಿ ಹಸಿವು ನೀಗಿಸುತ್ತಿದೆ. ಇಡೀ ದೇಶವೇ ಕೊವಿಡ್ ಮಹಾಮಾರಿ ಯಿಂದ ಹಾಕಲಾಗಿರುವ ಲಾಕ್ ಡೌನ್ ಗೆ ತತ್ತರಿಸಿ ಹೋಗಿದೆ.ದುಡಿಮೆಯಿಲ್ಲದೇ ಜನ ಹಸಿವಿನಿಂದ ಸಂಕಷ್ಟದಲ್ಲಿದ್ದಾರೆ.ಒಂದೊತ್ತು ಊಟಕ್ಕೂ