ಕುಂದಾಪುರ: ಒತ್ತಿನಣೆಯ ಗುಡ್ಡ ಕುಸಿತ
ಕುಂದಾಪುರ: ಬೈಂದೂರು-ಶಿರೂರು ಮಧ್ಯಭಾಗದ ಒತ್ತಿನಣೆ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಬುಧವಾರ ಗುಡ್ಡ ಕುಸಿದು ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಬೈಂದೂರು ಶಿರೂರು ನಡುವಿನ ರಾಷ್ಟೀಯ ಹೆದ್ದಾರಿ ಪಕ್ಕದ ಗುಡ್ಡದ ಕಾಲಿನಲ್ಲಿ ಚರಡಿ ಕಾಮಗಾರಿ ನಡೆಯುತ್ತಿದ್ದು ಅಲ್ಲಿಯೇ ಗುಡ್ಡ ಜರಿತ ಉಂಟಾಗಿದೆ. ಬೈಂದೂರು ತಹಶಿಲ್ದಾರರಾದ ಶೋಭಾಲಕ್ಷ್ಮೀ ಎಚ್. ಎಸ್ ಅವರು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿಲ್ಲ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆದ ಬಳಿಕ ಒತ್ತಿನಣೆಯಲ್ಲಿ 3 ಭಾರಿ ಗುಡ್ಡ ಕುಸಿದು ಸಂಚಾರಕ್ಕೆ ಅಡಚಣೆಯಾಗಿತ್ತು. ಒಂದು ಪಾರ್ಶ್ವದಲ್ಲಿ ಸೈಡ್ ವಾಲ್ ನಿರ್ಮಿಸಲಾಗಿದೆ.