ಕೆಪಿಟಿ ಜಂಕ್ಷನ್ ಬಳಿ ನೂತನವಾಗಿ ಫ್ಲೈಓವರ್ ನಿರ್ಮಾಣಕ್ಕೆ ಅನುಮೋದನೆ
ಮಂಗಳೂರಿನ ಕೆಪಿಟಿ ಜಂಕ್ಷನ್ ಬಳಿ ನೂತನವಾಗಿ ಫ್ಲೈಓವರ್ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮೋದನೆ ನೀಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಕೆಪಿಟಿ ಜಂಕ್ಷನ್ ಬಳಿ ನೂತನವಾಗಿ ಫ್ಲೈಓವರ್ ನಿರ್ಮಾಣಕ್ಕೆಅಂದಾಜು 34.8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಫ್ಲೈಓವರ್ ಗೆ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ. ಕೆಪಿಟಿ ಜಂಕ್ಷನ್ ನಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಇರುವ ಈ ಕಾಮಗಾರಿಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಅನುಮೋದನೆ ನೀಡಿರುವುದರಿಂದ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದರು.
ಕೆಪಿಟಿ ಪ್ರದೇಶದಲ್ಲಿ ವಾಹನ ದಟ್ಟಣೆ ಅಧಿಕವಾಗಿರುವ ಕಾರಣ ಸಂಚಾರ ಸಮಸ್ಯೆ ಎದುರಾಗುತ್ತಿತ್ತು ಇಲ್ಲಿ ಹೆದ್ದಾರಿಗೆ ಮಂಗಳೂರಿನ ಏರ್ ಪೋರ್ಟ್ ರಸ್ತೆಯಿಂದ ನಗರ ಪ್ರವೇಶ ರಸ್ತೆಯ ಸಂಪರ್ಕದಿಂದಾಗಿ ವಾಹನ ದಟ್ಟಣೆ ನಿತ್ಯ ಅಧಿಕವಾಗುತ್ತಿದೆ. ಹೀಗಾಗಿ ಬದಲಿ ರಸ್ತೆ ವ್ಯವಸ್ಥೆಯ ಬಗ್ಗೆ ಸ್ಥಳೀಯವಾಗಿ ಆಗ್ರಹ ಕೇಳಿಬಂದಿತ್ತು. ಇದರಂತೆ ಇದೀಗ ಫ್ಲೈಓವರ್ ನಿರ್ಮಾಣಕ್ಕೆ ಪ್ರಾಧಿಕಾರವು ನಿರ್ಧಾರ ಕೈಗೊಂಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ