ಕೊಟ್ಟಾರ ಕರ್ಲುಟ್ಟಿ ಸಾನಿಧ್ಯಕ್ಕೆ ಬೆಳ್ಳಿಯ ದರ್ಶನದ ಬೆತ್ತ ಸೇವೆ
ಕೊಟ್ಟಾರ ಶ್ರೀಯಾನ್ ಮಹಾಲಿನಲ್ಲಿರುವ ವಿದ್ಯಾ ಸರಸ್ವತಿ ಕ್ಷೇತ್ರದ ಪರಿವಾರ ದೇವರಾದ ಕರ್ಲುಟ್ಟಿ ಸಾನಿಧ್ಯಕ್ಕೆ ಬೆಳ್ಳಿಯ ಕವಚ ಇರುವ ೫ ದರ್ಶನದ ಬೆತ್ತ ಮತ್ತು ಕರ್ಲುಟ್ಟಿ ಅಲ್ಲ ಆರಾಧನೆಕ್ಕೆ ಬೇಕಾಗಿರುವ ಪೂಜಾ ಸಾಮಗ್ರಿಗಳನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದ ಸಹಾಯಕ ಪ್ರಬಂಧಕರಾದ ಪ್ರವೀಣ್ ಕುಮಾರ್ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ನವೀನ್ ಚಂದ್ರ ಶ್ರೀಯಾನ್ ರವರಿಗೆ ಹಸ್ತಾಂತರಿಸಿದರು.
ನವಗ್ರಹ ಶಾಂತಿ ಹೋಮ ಮಾಡಿ ನವ ಕಲಶವನ್ನು ಬೆಳ್ಳಿಯ ಬೆತ್ತಕ್ಕೆ ಅಭಿಷೇಕ ಸಲ್ಲಿಸಲಾಯಿತು. ಬಳಿಕ ಶ್ರೀ ದೇವರಿಗೆ ಮಹಾಪೂಜೆ ನೆರವೇರಿಸಿ ಕರ್ಲುಟಿ ಅಮ್ಮನವರಿಗೆ ಸಮರ್ಪಣೆ ಮಾಡಲಾಯಿತು.
ಈ ಪೂಜಾ ವಿಧಿ ವಿಧಾನವನ್ನು ಶ್ರೀಕ್ಷೇತ್ರದ ಅರ್ಚಕ ನಿಕಿತ್ ಎನ್ ಶ್ರೀಯಾನ್, ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ತುಳಸಿ ಎನ್ ಶ್ರೀಯಾನ್, ಭಕ್ತಾದಿಗಳಾದ ನಾಗಪ್ರಿಯ ಪ್ರವೀಣ್, ಚೇತನ ಶೆಟ್ಟಿ ಕೊಟ್ಟಾರ, ಸುಜಾತ ಪ್ರವೀಣ್ ಕೊಟ್ಟಾರ, ನವರತ್ನ ರವೀಂದ್ರ, ಮಲ್ಲಿಕಾ ಕುಲಾಲ್, ಸುಂದರ್ ಕುಲಾಲ್, ಹೇಮಾವತಿ ಸುಂದರ್, ತನಿಶಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಈ ಎಲ್ಲಾ ಕಾರ್ಯಕ್ರಮವನ್ನು ಸರಕಾರದ ಆದೇಶದಂತೆ ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ ನಡೆಸಲಾಯಿತು.