ಕೋಟಿ ಗಟ್ಟಲೆ ವೆಚ್ಚದಲ್ಲಿ ನಿರ್ಮಾಣಗೊಂಡು 3ವರ್ಷ ಕಳೆದರೂ, ಆರಂಭವಾಗಿಲ್ಲ ಉರ್ವ ಮಾರುಕಟ್ಟೆ
ಅದು ಬರೋಬರಿ 13.5 ರೂ ಕೋಟಿ ವೆಚ್ಚದಲ್ಲಿ ನಡೆದ ಮಾರ್ಕೇಟ್….. ಉದ್ಘಾಟನೆಗೊಂಡು 3 ವರ್ಷ ಕಳೆದರೂ , ವ್ಯಾಪಾರಕ್ಕಾಗಿ ಗ್ರಾಹಕರಿಗೆ ಬಿಟ್ಟುಕೊಟ್ಟಿಲ್ಲ…. ಬೀಕೋ ಎನ್ನುತ್ತಿರುವ ಕಟ್ಟಡ… ಹಾಗಾದ್ರೆ ಅದು ಯಾವ ಮಾರುಕಟ್ಟೆ ಅಂತೀರಾ ಇಲ್ಲಿದೆ ಸ್ಟೋರಿ…
2019ರ ಜೂನ್ 28ರಂದು ಮಂಗಳೂರಿನ ಉರ್ವನಲ್ಲಿ ನಿರ್ಮಾಣಗೊಂಡ ಮಾರ್ಕೇಟ್…..ಉದ್ಘಾಟನೆಗೊಂಡ ಬಳಿಕ ಮಳಿಗೆಗಳನ್ನು ಏಲಂ ಮಾಡದೇ ಬಿಕೋ ಎನ್ನುತ್ತಿರುವ ಕಟ್ಟಡ….. ಹೌದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉರ್ವ ಮಾರ್ಕೇಟ್..
ಅಭಿವೃದ್ಧಿ ಹೆಸ್ರಿನಲ್ಲಿ ಮಂಗಳೂರು ನಗರ , ಬೆಂಗಳೂರಿನ ನಂತರ ಎರಡನೇ ನಗರವಾಗಿ ಗುರುತಿಸಿಕೊಂಡಿದೆ. ಮಂಗಳೂರು ಜನರ ಅಗತ್ಯೆಗಳನ್ನು ಪೂರೈಸಿ, ಅವರಿಗೆ ಬೇಕಾದ ಪೂರಕವಾದ ವ್ಯವಸ್ಥೆಗಳನ್ನು ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಜಂಟಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಉರ್ವ ಮಾರ್ಕೇಟ್…. ಮಾರುಕಟ್ಟೆಯ ಒಳಗೆ ಪ್ರವೇಶ ಮಾಡುತ್ತಿದ್ದಂತೆ ಅವ್ಯವಸ್ಥೆಯ ಅಗರವಾಗಿ ಬಿಟ್ಟಿದೆ. ಇದರ ಬಗ್ಗೆ ಸಾಮಾಜಿಕ ಹೋರಾಟಗಾರ ಶಶಿಧರ್ ಶೆಟ್ಟಿ ಅವ್ರು ಮಾಡಿರುವ ವಿಡಿಯೋ ವೈರಲ್ ಆಗಿತ್ತು.
ಸುಸಜ್ಚಿತ ಹಾಗೂ ಅತ್ಯಾಧುನಿಕವಾಗಿ ಕೂಡಿರಬೇಕೆಂಬ ದೃಷ್ಟಿಯಿಂದ ನಿರ್ಮಾಣಗೊಂಡಿರುವ ಉರ್ವ ಮಾರ್ಕೇಟ್ನ ಸದ್ಯದ ಪರಿಸ್ಥಿತಿ . ಸಾಮಾಜಿಕ ಹೋರಾಟಗಾರ ಶಶಿಧರ್ ಶೆಟ್ಟಿ ಅವ್ರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು, ಎಲ್ಲಾವನ್ನು ಸ್ವಚ್ಚಗೊಳಿಸಿ ಬಿಟ್ಟಿದ್ದಾರೆ. ಇದೀಗ ಮಾರುಕಟ್ಟೆಯ ಒಳ ಪ್ರವೇಶ ಮಾಡದಂತೆ ಬೀಗ ಹಾಕಿಬಿಟ್ಟಿದ್ದಾರೆ.ಇನ್ನು ಉರ್ವ ಮಾರುಕಟ್ಟೆನ ಹೊಸ ಮಾರುಕಟ್ಟೆಯ ಕಟ್ಟಡದ ಅಂಗಡಿ ಕೋಣೆಗಳಿಗೆ ಮತ್ತೊಮ್ಮೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಇಲ್ಲಿ ವ್ಯಾಪಾರ ಆರಂಭವಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ.ಇತ್ತೀಚಿಗಷ್ಟೇ ಮೇಯರ್ ಪ್ರೇಮನಂದ್ ಶೆಟ್ಟಿ ಅವರು ಉರ್ವ ಮಾರುಕಟ್ಟೆ ಭೇಟಿ,ನೀಡಿ, ಅಲ್ಲಿನ ಪರಿಸ್ಥಿತಿಯ ಬಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇನ್ನು ಅದಷ್ಟು ಬೇಗ ಟೆಂಡರ್ ಪ್ರಕ್ರಿಯೆ ನಡೆದು, ಉರ್ವ ಮಾರುಕಟ್ಟೆಯಲ್ಲಿ ವ್ಯಾಪಾರ ಶೀಘ್ರ ಆರಂಭಿಸಲಾಗುವುದು ಮೇಯರ್ ಹೇಳಿದ್ದಾರೆ.
ಉರ್ವ ಮಾರ್ಕೆಟ್ ಸಂಕೀರ್ಣ ತಳ ಅಂತಸ್ತು, ನೆಲ ತಳ ಅಂತಸ್ತು, ನೆಲ ಮೇಲಂತಸ್ತು, ಮೂರು ಅಂತಸ್ತುಗಳ ಒಟ್ಟು 84,891 ಚದರ ಅಡಿ ವಿಸ್ತೀರ್ಣವಿದೆ. ತಳ ಅಂತಸ್ತಿನಲ್ಲಿ 73 ಕಾರು, 40 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, 5 ಶಾಪ್, ನೆಲ ತಳ ಅಂತಸ್ತಿನಲ್ಲಿ 21 ಮೀನು, ಮಟನ್ ಸ್ಟಾಲ್, ನೆಲ ಮೇಲಂತಸ್ತಿನಲ್ಲಿ 65 ಹೂ, ಹಣ್ಣು, ತರಕಾರಿ, ಇತರ ಸ್ಟಾಲ್ಗಳು, ಮೊದಲ ಅಂತಸ್ತಿನಲ್ಲಿ ಕ್ಯಾಂಟೀನ್, ಇತರ 16 ಶಾಪ್ಗ್ಳು, 2ನೇ ಅಂತಸ್ತಿನಲ್ಲಿ 8, 3ನೇ ಅಂತಸ್ತಿನಲ್ಲಿ 7 ಕಚೇರಿ ಮಳಿಗೆಗಳಿವೆ. ಇನ್ನು ಹೈಟೆಕ್ ಮಾರುಕಟ್ಟೆ ಎಂಬ ಹೆಗ್ಗಳಿಕೆಯನ್ನ ಪಡೆದುಕೊಂಡಿರುವ ಈ ಮಾರುಕಟ್ಟೆ, ಎಷ್ಟರ ಮಟ್ಟಿಗೆ ಹೈಟೆಕ್ ಆಗಿದೆ ಎಂಬುವುದನ್ನ ನಾವೇ ನಿರ್ಧಾರ ಮಾಡಬೇಕಾಗಿದೆ.
ಸುಖಾಸುಮ್ಮನೆ ಪ್ರಯೋಜನಕ್ಕೆ ಬಾರದ ಸಂಕೀರ್ಣ ನಿರ್ಮಸಿ, ಅನೈತಿಕ ಚಟುವಟಿಕೆಗಳ ತಾಣವನ್ನಾಗಿಸೋದು ಬುದ್ದಿವಂತರ ನಾಡು ಮಂಗಳೂರಿಗೆ ಶೋಭೆ ತರುವಂತಹುದೇ ಎಂಬುದನ್ನ ಇಲ್ಲಿನ ಜನಪ್ರತಿನಿಧಿಗಳು, ನಾಗರಿಕರು ಒಮ್ಮೆ ಆಲೋಚಿಸಬೇಕಾಗಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಎಲ್ಲಾ ಗೊಂದಲಗಳನ್ನು ಬಗೆಹರಿಸುವ ಕೆಲಸ ಮಾಡಲಿ ಎಂಬುವುದೇ ನಮ್ಮ ಹಾರೈಕೆ