ರಾಜ್ಯ ಸರಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಅ. 28ರ ಗುರುವಾರ ಬೆಳಿಗ್ಗೆ 11 ಗಂಟೆಗೆ ತಣ್ಣೀರುಬಾವಿ ಬೀಚ್‍ನಲ್ಲಿ ಕನ್ನಡ ಭಾಷೆಯ ಮಹತ್ವ ಸಾರುವ ಲಕ್ಷ ಕಂಠಗಳ ಸಮೂಹ ಗೀತ ಗಾಯನವನ್ನು ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ
ಮಂಗಳೂರು ಮಹಾನಗರ ಪಾಲಿಕೆಯು ದಸರಾ ಹಬ್ಬಕ್ಕೆ ದಾರಿ ದೀಪಾಲಂಕಾರಕ್ಕಾಗಿ 38 ಲಕ್ಷ ಹಣವನ್ನು ಪೋಲು ಮಾಡುತ್ತಿರುವ ಹಿಂದೆ ಬಿಜೆಪಿ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣವು ಅಡಗಿದೆ ಮಾತ್ರವಲ್ಲ ಇದು ಜನತೆಯ ತೆರಿಗೆಯ ಹಣವನ್ನು ದಸರಾ ಹೆಸರಲ್ಲಿ ಲೂಟಿ ಮಾಡಲು ಹೊರಟಿದೆ ಎಂದು ಸಿಪಿಐಎಂ ಪಕ್ಷದ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಇಂದು ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಸಮಾನ ಮನಸ್ಕ ಸಂಘಟನೆ, ಪಕ್ಷಗಳ ಒಕ್ಕೂಟದ ಆಶ್ರಯದಲ್ಲಿ ನಡೆದ
ರಾಜ್ಯ ಮತ್ತು ನಗರದ ಆಡಳಿತದಲ್ಲಿ ಪರ್ಸಂಟೆಜ್ ಸರಕಾರವಿದೆ.ಸರಿಯಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡದೆ ಜನರ ಮೇಲೆ ಬರೆ ಎಳೆದಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಪ್ರತಿ ಪಕ್ಷದ ನಾಯಕ ಎ.ಸಿ.ವಿನಯ್ ರಾಜ್ ಹೇಳಿದರು. ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಂಗಳೂರು ಪಾಲಿಕೆ ಘನ ತ್ಯಾಜ್ಯ ನಿರ್ವಹಣೆಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದ್ರೆ ಅದರ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಮಂಗಳೂರು ನಗರ ಸ್ವಚ್ಛ ಮಂಗಳೂರು
ಮಂಗಳೂರು ನಗರ ಸ್ವಚ್ಛ ನಗರ ಎಂಬುದಕ್ಕೆ ಹಲವು ಬಾರಿ ಪ್ರಶಸ್ತಿ ಪಡೆದಿದೆ. ಆದರೆ ಇತ್ತಿಚೀನ ದಿನಗಳಲ್ಲಿ ಆ ಹೆಸರಿಗೆ ಚ್ಯುತಿ ಬಂದಿದೆ. ಕಸ ವಿಲೇವಾರಿಯ ನಿರ್ವಹಣೆ ನಗರದಲ್ಲಿ ಸಮರ್ಪಕವಾಗಿಲ್ಲ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪಿಸಿದರು. ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸುಮಾರು 52 ಕೋಟಿ ರೂ ವೆಚ್ಚದಲ್ಲಿ ಕಸವನ್ನ ವಿಲೇವಾರಿಗೆ ಬಳಸಲು ಮುಂದಾಗಿದೆ. ಪಾಲಿಕೆ 38 ಕೋಟಿ ಕಸ ವಿಲೇವಾರಿ ವಾಹನ ಖರೀದಿಸಿ ವಾಹನ
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಮೇಯರ್ ಆಗುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಜನರು ನಮಗೆ ಮತ ನೀಡಿ ಸ್ಪಷ್ಟ ಬಹುಮತ ಕೊಟಿದ್ದಾರೆ. ಜೆಡಿಎಸ್ ತತ್ವ ಪ್ರಕಾರ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು. ಜೆಡಿಎಸ್ ಕಾಂಗ್ರೆಸ್ ಮಾಡಿದ ಉಪಕಾರ ಮರಿಯಲ್ಲ. ಜ್ಯಾತ್ಯಾತೀತ ನಿಲುವಿನ ಹಿನ್ನೆಲೆ ನಾವು ಅವ್ರಿಗೆ ಅವಕಾಶ ನೀಡಿದ್ದೇವೆ. ರಾಜ್ಯಸಭೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು. ನಗರದ ಕೆಪಿಟಿಯಿಂದ ಮೇರಿಹಿಲ್ ತನಕ ಮನಪಾ ಅಧಿಕಾರಿಗಳು ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ಇಳಿದಿದ್ದಾರೆ.ರಸ್ತೆಯ ಬದಿಯಲ್ಲಿದ್ದಂತಹ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡಲಾಯಿತು.
ಮಂಗಳೂರಿನ ಪಣಂಬೂರಿನ ಸಮುದ್ರ ತೀರದಲ್ಲಿ ತ್ಯಾಜ್ಯ ರಾಶಿಗೆ ಕೊನೆಗೂ ಮುಕ್ತಿ ಸಿಕ್ಕಿದಂತಾಗಿದೆ. ವಿ4 ನ್ಯೂಸ್ನ ವರದಿಗೆ ಎಚ್ಚೆತ್ತು ಮಂಗಳೂರು ಮಹಾನಗರ ಪಾಲಿಕೆ ಸ್ವಚ್ಛತಾ ಕಾರ್ಯವನ್ನ ಕೈಗೊಂಡಿದೆ. ಇನ್ನು ನಗರ ಪಾಲಿಕೆ ಸಿಬ್ಬಂದಿಗಳು ಸ್ವಚ್ಛ ಕಾರ್ಯವನ್ನು ಕೈಗೊಂಡಿದ್ದಾರೆ. ಪಣಂಬೂರು ಸಮುದ್ರ ತೀರದಲ್ಲಿ ಕಳೆದ ಮೂರು ದಿನಗಳಿಂದ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುವುದರಿಂದ ಬೀಚ್ ಸೌಂದರ್ಯಕ್ಕೆ ಧಕ್ಕೆಯಾಗಿತ್ತು. ಸಮುದ್ರಕ್ಕೆ ಪ್ರವಾಸಿಗರೇ ಎಸೆದ ಕಸ ಈಗ ದೊಡ್ಡ
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಮರಕಡ 14ನೇ ವಾರ್ಡಿನಲ್ಲಿ ವಿಮಾನ ನಿಲ್ದಾಣ ರಸ್ತೆಗೆ ತಡೆ ಗೋಡೆ ಹಾಗೂ ಫುಟ್ ಪಾತ್ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿತು. ಮಂಗಳೂರು ಮಹಾನಗರ ಪಾಲಿಕೆಯ ಪ್ರೀಮಿಯಂ ಎಫ್. ಎ .ಆರ್ ನಿಧಿಯಿಂದ ಮತ್ತು ಸಾಮಾನ್ಯ ನಿಧಿಯಿಂದ 3.96 ಕೋಟಿ ಅನುದಾನದಲ್ಲಿ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಉಪಮೇಯರ್ ಸುಮಂಗಲ ರಾವ್ ,
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪಾರ್ಕ್ ಮುಂಭಾಗದಲ್ಲಿ ಅಕ್ರಮ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ. ಪಾಲಿಕೆ ಕಮೀಷನರ್ ಅಕ್ಷಯ್ ಶ್ರೀಧರ್ ಅವರ ಸೂಚನೆ ಮೇರೆಗೆ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ತೆರವು ನಡೆಸಲಾಯ್ತು. ಪಾರ್ಕ್ ಮುಂಭಾಗದಲ್ಲಿ ಸುಮಾರು 10ಕ್ಕೂ ಅಧಿಕ ಅಕ್ರಮ ಗೂಡಂಗಡಿಗಳ ತೆರವು ಮಾಡಲಾಗಿದೆ. ಇನ್ನು ಈ ಪ್ರದೇಶದಲ್ಲಿ ಸ್ಮಾಟ್ ಸಿಟಿ ಯೋಜನೆಯಲ್ಲಿ ರಸ್ತೆ ಕಾಮಗಾರಿ ಹಾಗೂ ಫುಡ್ ಕೋರ್ಟ್ ಗಳ ಕಾಮಗಾರಿ ನಡೆಸಲಾಗುತ್ತದೆ. ಈ
ಮಂಗಳೂರು ಮಹಾನಗರ ಪಾಲಿಕೆಯ ಉರ್ವ ಮಾರುಕಟ್ಟೆ ಸಂಕೀರ್ಣಕ್ಕೆ ಇಂದು ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾನಗರ ಪಾಲಿಕೆಯ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದಅಕ್ಷಯ್ ಶ್ರೀಧರ್ , ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಗಣೇಶ್ ಕುಲಾಲ್, ಸಂಧ್ಯಾ ಮೋಹನ್ ಆಚಾರ್, ಜಗದೀಶ್ ಶೆಟ್ಟಿ ಬೋಳೂರು, ಪಾಲಿಕೆ ನಾಮನಿರ್ದೇಶಿತ