ಕೋವಿಡ್ ವಾರಿಯರ್ಸ್ಗಳಿಗೆ ಕೋವಿಡ್ ಸಂರಕ್ಷಣಾ ಕಿಟ್ : ಸಚಿವ ಶ್ರೀಮಂತ್ ಪಾಟೀಲ್
ಬೆಳಗಾವಿ: ಸಚಿವ ಶ್ರೀಮಂತ ಪಾಟೀಲ ಫೌಂಡೇಶನ ವತಿಯಿಂದ ಕೊರೊನಾ ವಾರಿಯರ್ಸ್ಗಳಿಗೆ ಕೋವಿಡ್ ಸಂರಕ್ಷಣಾ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಅಥಣಿ ಸುಗರ್ಸ್ ಕಾರ್ಖಾನೆ ಆವರಣದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಕೋವಿಡ್ ಸಂರಕ್ಷಣಾ ಕಿಟ್ ವಿತರಿಸಲಾಯಿತು.
ಸಚಿವರ ಆಪ್ತ ಕಾರ್ಯದರ್ಶಿಯಾದ ಸಚಿನ್ ದೇಸಾಯಿ ಅವರು ಮಾತನಾಡಿ,ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಸ್ಯಾನಿಟೈಜರ್ ವಿತರಿಸುವುದರ ಜೊತೆಗೆ, ಸುಮಾರು 40 ಲಕ್ಷ ವೆಚ್ಚದಲ್ಲಿ ಫೌಂಡೇಶನ್ ವತಿಯಿಂದ ಸಿಲೆಂಡರ್, ಆಕ್ಸಿಜನ್ ಕಿಟ್, 5 ವೆಂಟಿಲೇಟರ್,ಕೆಲವೊಂದು ಆಸ್ಪತ್ರೆಗಳಿಗೆ ಹಣದ ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಅಥಣಿ ಪಟ್ಟಣದ ಖ್ಯಾತ ಗುತ್ತಿಗೆದಾರರು ಹಾಗೂ ಸಮಾಜಸೇವಕರಾದ ನಾನಾಸಾಹೇಬ ಅವತಾಡೆ ಮಾತನಾಡಿ ಯಾವುದೇ ಹಬ್ಬ,ಬಂದರು ಜಾತಿ-ಮತಭೇದವಿಲ್ಲದೆ ಕ್ಷೇತ್ರದ ಜನತೆ ಸಿಹಿತಿಂಡಿ ಹಂಚುವುದು, ಇಂತಹ ಹತ್ತು ಹಲವು ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಸಚಿವ ಶ್ರೀಮಂತ ಪಾಟೀಲ ಅವರು ಸಂಜೀವಿನಿ ಆಗಿದ್ದಾರೆ ಎಂದರು.ಇದೆ ಸಮಯದಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗಳಾದ ,ವಿನಾಯಕ ಶಿಂದೆ ,ರಾಜು ಮಾನೆ ,ರಾಜು ಡೋಳ್ಳಿ,ಮುದ್ದು ಮುಲ್ಲಾ ,ಬಾಪು ಪಾಟೀಲ , ಮುಂತಾದವರು ಉಪಸ್ಥಿತರಿದ್ದರು.