ಗಮನ ಸೆಳೆದ ಕೃಷ್ಣ ಜನ್ಮಾಷ್ಠಮಿಯ ಡಿಸೈನರ್ ವೇರ್
ಪ್ರತಿಯೊಂದು ವಿಶೇಷ ಹಬ್ಬದ ಸಂದರ್ಭದಲ್ಲಿ ಆಯಾ ಹಬ್ಬದ ಮಹತ್ವಕ್ಕೆ ಸಂಬಂಧಿಸಿದ ಫೆಸ್ಟಿವ್ ವೇರ್ ಮೂಲಕ ಫ್ಯಾಶನ್ ಪ್ರಿಯರನ್ನು ಆಕರ್ಷಿಸುತ್ತಿದೆ ಬೆಂಗಳೂರಿನ ಜಿಯಾನಿ ಡಿಸೈನರ್ಸ್ ಸಂಸ್ಥೆ.ಈ ಬಾರಿಯ ಶ್ರೀ ಕೃಷ್ಣಾಷ್ಟಮಿಗೆ ಯಶೋಧೆ ಕೃಷ್ಣ ಪರಿಕಲ್ಪನೆಯ ಧಿರಿಸಿನ ಫೋಟೋ ಶೂಟ್ ಮೂಲಕ ಜಿಯಾನಿ ಡಿಸೈನರ್ ಸಂಸ್ಥೆ ಫ್ಯಾಷನ್ ಪ್ರಿಯರ ಗಮನ ಸೆಳೆಯಿತು .
ಜನಪ್ರಿಯ ಮೊಡೇಲ್ ಪ್ರಿಯಾ ಕುಮಾರ್ ಅವರು ಯಶೋಧೆಯಾಗಿ ಆಕರ್ಷಕ ಫೆಸ್ಟಿವ್ ವೇರ್ ನಲ್ಲಿ ಮಿಂಚಿದರು. ಯಶೋಧೆ ಪುಟ್ಟ ಕೃಷ್ಣನನ್ನು ಲಾಲಿಸುವ ಮನಮೋಹಕ ದೃಶ್ಯ ಸಂಯೋಜನೆಯ ಫೋಟೋ ಶೂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಬಹುಪ್ರಸಿದ್ಧಿ ಪಡೆದಿದೆ.