ಗೋವು ನಮ್ಮೆಲ್ಲರ ತಾಯಿ – ಗೋ ಸೇವೆಯೇ ನಮಗೆ ಕರ್ತವ್ಯ – ದಯಾನಂದ ಜಿ. ಕತ್ತಲ್ಸಾರ್
ಮಂಗಳೂರು: ಗೋವು ಜಗತ್ತಿನೆಲ್ಲರ ತಾಯಿ. ಆಕೆಯ ಸೇವೆಯನ್ನು ಮಾಡ ಬೇಕಾದುದು ನಮಗೆ ಕರ್ತವ್ಯ. ನಮ್ಮ ತಾಯಿಯ ನಂತರದ ಸ್ಥಾನ ಆಕೆಗೇ ಹೋಗುತ್ತದೆ. ಮೂರು ಮೂರ್ತಿಗಳು, ಮೂವತ್ತು ಮೂರು ಕೋಟಿ ದೇವತೆಗಳು ಅಷ್ಟ ಲಕ್ಷ್ಮೀಯರು, ರತಿ, ವಾಣಿ, ಗಿರಿಜೆಯರು ನೆಲೆಗೊಂಡಿದ್ದಾರೆ ಆಕೆಯ ಮೈ ಮೇಲೆ ಹಾಗಾಗಿ ಆಕೆ ಸರ್ವತ್ರ ಪೂಜ್ಯಳು. ಸರ್ವವಂದ್ಯಳೂ ಆಗಿದ್ದಾಳೆ. ಅಂತಹಾ ಗೋಮಾತೆಯ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿ ಹೇಳಬೇಕಾದ ಅಗತ್ಯ ಇಂದಿದೆ. ಗೋವಿನ ಮಹತ್ವ, ಗೋವಿನಿಂದಾಗುವ ಪ್ರಯೋಜನಗಳು, ಗೋ ಉತ್ಪನ್ನಗಳ ಬಗ್ಗೆ ತಿಳಿಹೇಳುವ ಗೋವು ಜಗತ್ತ್ದಪ್ಪೆ -ಗೋ ಏಳ್ಕಥೆ ಎಂಬ ಗೋಕಥಾ ಸರಣಿ ಇಲ್ಲಿ ಆಯೋಜನೆಗೊಂಡಿದೆ. ರಾಷ್ಟ್ರೀಯ ಚಿಂತನೆಯ ಈ ಸಪ್ತಾಹದಲ್ಲಿ ಗೋವಿಗಾಗಿ ನಾವು ನೀವು ಎಂಬ ವಿಚಾರವನ್ನು ಎಲ್ಲರಿಗೂ ತಿಳಿಸುವ ಕಾರ್ಯ ಇಲ್ಲಾವಾಗುತ್ತಿದೆ. ಇದು, ಈ ಸಂದೇಶ ಎಲ್ಲರಿಗೂ ತಿಳಿಯಲಿ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ದಯಾನಂದ ಜಿ. ಕತ್ತಲ್ಸಾರ್ರವರು ತುಳುಭವನದ ’ಸಿರಿಚಾವಡಿಯಲ್ಲಿ ಗೋವು ಜಗತ್ತ್ದಪ್ಪೆ ಗೋ ಏಳ್ಕಥೆ ಎಂಬ ಗೋಕಥಾ ಸಪ್ತಾಹವನ್ನು ಉದ್ಘಾಟಿಸುತ್ತಾ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕವಿತಾರವರು ಗೋಮಾತೆಗೆ ಪುಷ್ಪಾರ್ಚನೆ ಮಾಡಿ ಗೋಕಥೆಗೆ ಚಾಲನೆ ನೀಡಿದರು. ಉದ್ಘಾಟನೆಯಂದು ಉಡುಪಿಯ ಶ್ರೀ ಭಕ್ತಿ ಭೂಷಣ್ ಜೀಯವರು ಗೋಕಥೆಯನ್ನು ನಡೆಸಿಕೊಟ್ಟರು. ಪ್ರಾಂತ ಗೋ ಸಂಯೋಜಕ ಶ್ರೀ ಪ್ರವೀಣ ಸರಳಾಯ, ಶ್ರೀ ಗಣೇಶ್ ಮಲ್ಲಿ, ಶ್ರೀ ಪ್ರಶಾಂತ್ ಉಪಸ್ಥಿತರಿದ್ದರು. ಕುಮಾರಿಯರಾದ ದಿವ್ಯಶ್ರೀ ಮತ್ತು ಧನ್ಯಶ್ರೀಯವರು ಗೋಗೀತೆಗಳನ್ನು ಹಾಡಿದರು. ವರ್ಕಾಡಿ ರವಿ ಅಲೆವೂರಾಯ ಕಾರ್ಯಕ್ರಮ ನಿರ್ವಹಿಸಿದರೆ; ಶ್ರಿ ರಮೇಶ್ ಭಟ್ ಸರವು ಧನ್ಯವಾದವಿತ್ತರು. ಶ್ರಿ ವೆಂಕಟೇಶ್ ಸ್ವಾಗತಿಸಿದರು.