ಡಾ. ಪ್ರವೀಣ್ ಪುತ್ರ ರಚಿಸಿದ “ವಾರಿಯರ್ಸ್ ಆಫ್ ದಿ ಬ್ಲೂ” ಪೈಂಟಿಂಗ್ ಪ್ರದರ್ಶನ
ಮಂಗಳೂರು ಕರಾವಳಿ ಚೋತ್ರ ಕಲಾ ಚಾವಡಿ ಬಲ್ಲಾಲ್‌ಭಾಗ್ ವತಿಯಿಂದ ವಾರಿಯರ್ಸ್ ಆಫ್ ದಿ ಬ್ಯೂ ಡಾ. ಪ್ರವೀಣ್ ಪುತ್ರ ಅವರು ಮೀನುಗಾರಿಕೆಯ ಬಗ್ಗೆ ರಚಿಸಿದ ಪೈಂಟಿಂಗ್‌ನ ಪ್ರದರ್ಶನ ನಡೆಯಿತು.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಕರಾವಳಿ ಚೋತ್ರ ಕಲಾ ಚಾವಡಿಯ ಸೆಕ್ರೆಟರಿ ಡಾ. ಎಸ್.ಎಮ್ ಶಿವಪ್ರಕಾಶ್ ಅವರು, ಕಲಾವಿದ ಪ್ರವೀಣ್ ಪುತ್ರ ಅವರು, ಸುಮಾರು 2 ಸಾವಿರಕ್ಕೂ ಹೆಚ್ಚು ಪೈಂಟಿಂಗ್‌ಗಳನ್ನು ರಚಿಸಿ ಎಲ್ಲರ ಮನಸನ್ನು ಗೆದ್ದಿದ್ದಾರೆ. ಮೀನುಗಾರ ಸಮುದಾಯದವರ ಧೈರ್ಯ ಸಾಹಸವನ್ನು ಪೈಂಟಿಮಗ್ ಮೂಲಕ ರಚಿಸಿದ್ದಾರೆ ಎಂದು ಹೇಳಿದರು.
ಆನಂತರ ಕಲಾವಿದ ಪ್ರವೀಣ್ ಪುತ್ರ ಅವರು ಮಾತನಾಡಿ, ಪೈಂಟಿಂಗ್ ಕಲೆ ನನ್ನ ಹವ್ಯಾಸ. ವಿವಿಧ ಚಿತ್ರಗಳನ್ನು ರಚಿಸಿದ್ದೇನೆ. ಉದ್ಯೋಗ ನಿಮಿತ್ತ ದೂರದ ಊರಿನಲ್ಲಿದ್ದರೂ ಡ್ರಾಯಿಂಗ್‌ನ್ನು ಹವ್ಯಾಸವಾಗಿಸಿದ್ದೇನೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕರಾವಳಿ ಚೋತ್ರ ಕಲಾ ಚಾವಡಿ ಬಲ್ಲಾಲ್‌ಭಾಗ್‌ನ ಅಧ್ಯಕ್ಷರಾದ ಕೋಟಿ ಪ್ರಸಾದ್ ಆಳ್ವಾ, ಗಣೇಶ್ ಸೋಮಯಾಜಿ, ಶ್ರೀಮತಿ ವಿನಯ ಉಪಸ್ಥಿತರಿದ್ದರು.