ತುಳು ಭವನದಲ್ಲಿ ತುಳು ಹಾಗೂ ಕನ್ನಡ ಚಲನಚಿತ್ರ ನಟನಾ ತರಗತಿ ಉದ್ಘಾಟನೆ

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಹಭಾಗಿತ್ವದಲ್ಲಿ ಲೆನ್ಸ್ ಕ್ಯಾಪ್ ಪಿಕ್ಚರ್ಸ್ ನಡೆಸುವ ತುಳು ಹಾಗೂ ಕನ್ನಡ ಚಲನಚಿತ್ರ ನಟನಾ ತರಗತಿ ಸೆ.5ರಂದು ತುಳು ಭವನದಲ್ಲಿ ಉದ್ಘಾಟನೆಗೊಳ್ಳಲಿದೆ.

ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ತುಳು ಹಾಗೂ ಕನ್ನಡ ಭಾಷೆಯಲ್ಲಿ ಈ ನಟನಾ ತರಗತಿ ನಡೆಯಲಿದ್ದು ತುಳುವಿಗೆ ಆದ್ಯತೆ ನೀಡಲಾಗುತ್ತದೆ ಎಂದರು.ಮೂರು ತಿಂಗಳ ಕಾಲ ಶನಿವಾರ ಹಾಗೂ ರವಿವಾರ ಈ ತರಬೇತಿ ನಡೆಯಲಿದೆ. ಈಗಾಗಲೇ 20 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಯಾವುದೇ ವಯೋಮಾನದ ನಟನಾ ಪ್ರತಿಭೆಗಳನ್ನು ವೇದಿಕೆಗೆ ತರುವ ನಿಟ್ಟಿನಲ್ಲಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಶನಿವಾರ ಅಪರಾಹ್ನ 2ರಿಂದ 5ರವರೆಗೆ ರವಿವಾರದಂದು ಬೆಳಗ್ಗೆ 9ರಿಂದ 12ರವರೆಗೆ ತರಬೇತಿ ನಡೆಯಲಿದೆ. ನೀನಾಸಂನ ಕಲಾವಿದ ವಿದು ಉಚ್ಚಿಲ್ ಪ್ರಮುಖ ತರಬೇತುದಾರರಾಗಿದ್ದು, ಸ್ಯಾಂಡಲ್‍ವುಡ್‍ನ ನಟರು ಕೂಡಾ ತರಬೇತಿಯಲ್ಲಿ ಭಾಗವಹಿಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮೋಹನ್ ಕೊಪ್ಪಳ, ರೋಹಿತ್ ಉಳ್ಳಾಲ, ಮೇಘನಾ ಅತ್ತಾವರ ಉಪಸ್ಥಿತರಿದ್ದರು.

Related Posts

Leave a Reply

Your email address will not be published.