ಧ್ವನಿ ವರ್ಧಕ ಮೂಲಕ ಶಬ್ದಮಾಲಿನ್ಯ ತಡೆಯಲು ಆಗ್ರಹ : ಅ.7ರಂದು ಪ್ರತಿಭಟನೆ

ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಹಿಂದೂ ದೇವಸ್ಥಾನಗಳನ್ನು ರಾತ್ರೋರಾತ್ರಿ ನೆಲಸಮ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಆದರೆ ಕಳೆದ 21 ವರ್ಷದ ಹಿಂದೆಯೇ ಶಬ್ದ ಮಾಲಿನ್ಯ ಹಿನ್ನೆಲೆಯಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಧ್ವನಿವರ್ಧಕ ಹಾಗೂ ಇತರೆ ಮಾಧ್ಯಮ ಮೂಲಕ ಶಬ್ದ ಮಾಲಿನ್ಯ ತಡೆಯಲು ಆದೇಶಿಸಿದೆ. ಹಲವಾರು ಹೈಕೋರ್ಟ್‍ಗಳಯ ಕಟ್ಟುನಿಟ್ಟಾಗಿ ಆಜ್ಞೆ ಪಾಲಿಸಲು ಹೇಳಿದ್ದರೂ ಇಂದಿಗೂ ಪಾಲನೆ ಯಾಕೆ ಆಗುತ್ತಿಲ್ಲ ಎಂದು ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಹೇಳಿದರು.
ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ನ್ಯಾಯಾಲಯದ ಆಜ್ಞೆ ಇದ್ದರೂ ಸರ್ಕಾರ, ಜನಪ್ರತಿನಿಧಿಗಳು, ಪೊಲೀಸ್¸, ಮಾಲಿನ್ಯ ನಿಯಂತ್ರಣ ಮಂಡಳಿಯ ಅಸಡ್ಡೆ, ನಿರ್ಲಕ್ಷ್ಯಕ್ಕೆ ದಿನೇ ದಿನೇ ಶಬ್ದ ಮಾಲಿನ್ಯ ಹೆಚ್ಚುತ್ತಲೇ ಇದೆ. ಇದು ಸಂವಿಧಾನ, ಕಾನೂನು, ನ್ಯಾಯಾಂಗ ನಿಂದನೆ ಸ್ಪಷ್ಟವಾಗಿದೆ.ಈ ಹಿನ್ನೆಲೆಯಲ್ಲಿ ಅ.7ರಂದು ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಮೊದಲ ಹಂತದ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷರಾದ ಪ್ರದೀಪ್ ಮೂಡುಶೆಡ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಬೊಕ್ಕಪಟ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಿಶೋರ್ ಸನಿಲ್, ನಗರ ಕಾರ್ಯದರ್ಶಿ ವೆಂಕಟೇಶ್ ಪಡಿಯಾರ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.