ನಾನು ಕೇಳಿದ ಖಾತೆ ನೀಡಿಲ್ಲ : ಸಚಿವ ಆನಂದ್ ಸಿಂಗ್ ಅಸಮಾಧಾನ

ಬಳ್ಳಾರಿ: ರಾಜ್ಯದ ನೂತನ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಖಾತೆ ಹಂಚಿಕೆ ಬೆನ್ನಲ್ಲೆ ಗಣಿನಾಡಿನ ಸಚಿವ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕೇಳಿದ ಖಾತೆ ಕೊಟ್ಟಿಲ್ಲ , ಕೊಟ್ಟರೆ ಸರಿ ಇಲ್ಲದಿದ್ದರೆ ಶಾಸಕನಾಗಿಯಷ್ಟೇ ಮುಂದುವರೆಯುವೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ನಾನು ಕೇಳಿದ ಖಾತೆಯನ್ನು ನೀಡಿಲ್ಲ. ಇದು ನನಗೆ ಮಾಡಿದ ಅವಮಾನ ಎನ್ನಲ್ಲ. ನನಗೆ ನಿರಾಸೆಯಾಗಿದೆ ಅದಕ್ಕಾಗಿ ಜನ ಸಂಪರ್ಕ ಬೆಳೆಸುವ ಒಳ್ಳೆ ಖಾತೆ ನೀಡಿ ಎಂದು ಕೇಳಿದ್ದೆ ಕೊಟ್ಟಿಲ್ಲ. ಕೊಡಿ ಎಂದು ಸಿಎಂ ಅವರ ಬಳಿ‌ ಮತ್ತೆ ಕೇಳಲು ನಾಳೆ ಅವರ ಬಳಿ ತೆರಳುವೆ. ಕೊಡದಿದ್ದರೆ ನನ್ನ ಹಾದಿ ನಾನು ತುಳಿಯುವೆ ನನಗೆ ಸಚಿವನಾಗಿಯೇ ಇರಬೇಕೆಂದಿಲ್ಲ. ಈ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು‌ ನಾನೇ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಹಾಗಂತ ಈ ವರೆಗೆ ಹೇಳಿರಲಿಲ್ಲ. ಸರ್ಕಾರ ರಚನೆಗೆ ನನ್ನದೇ ಆದ ತ್ಯಾಗ ಇದೆ. ಅದನ್ನು ಪರಿಗಣಿಸಬೇಕು ಎಂದು ಕೇಳಿದ್ದೆ ಆದರೆ ಆಗಿಲ್ಲ. ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರದಲ್ಲೂ ನನಗೆ ಮಹತ್ವದ ಖಾತೆ ಕೊಡಲಿಲ್ಲ ಎಂದರು.ನಾನು ಯಾವ ಖಾತೆ ಕೇಳಿದ್ದೆ ಎಂಬುದನ್ನು ಮಾದ್ಯಮಗಳ ಮುಂದೆ ಹೇಳಲು ಆಗಲ್ಲ ಎಂದರು

Related Posts

Leave a Reply

Your email address will not be published.