ನೆಲ್ಯಾಡಿಯ ಪೆರಿಯಶಾಂತಿಯಲ್ಲಿ ಬೈಕ್‌ಗೆ ಸರ್ಕಾರಿ ಬಸ್ ಢಿಕ್ಕಿ: ಬೈಕ್ ಸವಾರ ಮೃತ್ಯು
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೆಎಸ್‌ಆರ್ಟಿಸಿ ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನೆಲ್ಯಾಡಿ ಬಳಿಯ ಪೆರಿಯಶಾಂತಿಯ ಲಾವತ್ತಡ್ಕ ಸಮೀಪದ ಅಡ್ಡಜಾಲು ಎಂಬಲ್ಲಿ ನಡೆದಿದೆ.
ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು ಸಹ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಪರಾರಿಯಾದ ಕೆಎಸ್‌ಆರ್‌ಟಿಸಿ ಬಸ್ಸನ್ನು ಬೆನ್ನಟ್ಟಿ ಹೋದ ಪೊಲೀಸರು ಗುಂಡ್ಯ ಸಮೀಪ ವಶಕ್ಕೆ ಪಡೆದಿದ್ದಾರೆ. ಗುಂಡ್ಯದಿಂದ ನೆಲ್ಯಾಡಿ ಕಡೆಗೆ ತೆರಳುತಿದ್ದ ದ್ವಿಚಕ್ರ ವಾಹನಕ್ಕೆ ಲಾವತ್ತಡ್ಕ ಬಳಿ ಬಸ್ಸು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿ ಸಕಲೇಶಪುರ ಮೂಲದ ಅರುಣ್ ಎಂದು ಹೇಳಲಾಗುತ್ತಿದೆ.ಸಕಲೇಶಪುರದ ಕೆಂಚಮ್ಮನ ಹೊಸಕೋಟೆ ನಿವಾಸಿ ಮೋಹನ್ ಗಾಯಗೊಂಡ ವ್ಯಕ್ತಿ. ಗಂಭಿರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.