ನ.2೦ ರಂದು ಮಂಗಳಾ ಕ್ರೀಡಾಂಗಣದಲ್ಲಿಅಥ್ಲೆಟಿಕ್ ಕ್ರೀಡಾಕೂಟ
ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ನವೆಂಬರ್ 20 ರಂದು ಆಯೋಜಿಸಲಾಗಿದೆ ಎಂದು ಗೌರವ ಕಾರ್ಯದರ್ಶಿ ತಾರನಾಥ ಶೆಟ್ಟಿ ಹೇಳಿದರು.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕ್ರೀಡಾಕೂಟವು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಂಡು, ಸಂಜೆ 4 ಗಂಟೆಗೆ ಕ್ರೀಡಾಕೂಟದ ಸಮಾರೋಪ ನಡೆಯಲಿದೆ. ಇದರದಲ್ಲಿ ಬಾಲಕ ಬಾಲಕಿಯರ 12 ರಿಂದ 16 ರ ವಯೋಮಿತಿಯ ಸ್ಪರ್ಧೆಯು ಜರುಗಲಿದೆ. 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಆನಂತರ ಮಾತನಾಡಿದ ಟ್ರಸ್ಟಿ ಕೃಷ್ಣ ಶೆಣೈ ಅವರು, ಕ್ರೀಡಾಕೂಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ನ್ಯಾಷನಲ್ ಇಂಟರ್ ಡಿಸ್ಟ್ರಿಕ್ಟ್ ಜ್ಯೂನಿಯರ್ ಅಥ್ಲೆಟಿಕ್ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ದಕ್ಷಿಣ ಕನ್ನಡ ಅಥ್ಲೆಟಿಕ್ಸ್ ಅಸೋಸಿಯೇಶನ್ನ ಸೇವಂತಿ ಉಪಸ್ಥಿತರಿದ್ದರು.