ಪರಸ್ಪರ ಸೌಹಾರ್ದತೆಯಿಂದ ಮೀನುಗಾರಿಕೆ ಮಾಡಲಿ ಎಂದು ಸತ್ಯನಾರಾಯಣ ಪೂಜೆ
ಕುಂದಾಪುರ ತಾಲೂಕು ಗಂಗೊಳ್ಳಿಯಲ್ಲಿ ಪ್ರಾಥಮಿಕ ಮೀನುಗಾರರ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚಗೋಡು ಇವರ ನೇತೃತ್ವದಲ್ಲಿ ಮಸ್ತ್ಯ ಸಂಪತ್ತು ಹೇರಳವಾಗಿ ದೊರೆಯಲಿ ಮತ್ತು ಇತ್ತೀಚಿನ ದಿನಗಳಲ್ಲಿ ಮೀನಗಾರರಲ್ಲಿ ವೈಮನಸ್ಸು ಉಂಟಾಗುತ್ತಿದ್ದು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಪರಸ್ಪರ ಸೌಹಾರ್ದತೆ ಯಿಂದ ಮೀನುಗಾರಿಕೆ ಮಾಡಲಿ ಎಂಬ ಸದುದ್ದೇಶದಿಂದ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗಂಗೆ ಮಾತೆಗೆ ನಮೀಸುತ್ತಾ ಮತ್ಸ್ಯ ಬೇಟೆಯಾಡುವಾಗ ಯಾವುದೇ ಅವಘಡ ಸಂಭವಿಸಿದೆ ಇರಲಿ ಎಂದು ಪ್ರಾರ್ಥಿಸಿದರು.ಕಾರ್ಯಕ್ರಮದಲ್ಲಿ ಗಂಗೊಳ್ಳಿ ಪರ್ಷಿಯನ್ ಬೋಟ್ ಸಹಕಾರಿ ಸಂಘದ ಅಧ್ಯಕ್ಷರಾದ ನಾರಾಯಣ ಖಾರ್ವಿ, ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು, ಮೀನುಗಾರರ ಸಂಘದ ವ್ಯವಸ್ಥಾಪಕರಾದ ಮೋಹನ್ ಖಾರ್ವಿ ಮತ್ತು ಸಿಬ್ಬಂದಿಗಳು ಹಾಗೂ ಊರಿನ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದು ಸರ್ವರಿಗೂ ಸಮಪಾಲು ಸಮಬಾಳು ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.