ಪಶುಸಂಗೋಪನಾ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ
ಸತತ ಐದು ವರ್ಷದಿಂದ ಕೆ.ಹೊಸಕೋಟೆಯ ಪಶುಸಂಗೋಪನ ಆಸ್ಪತ್ರೆಯು ವೈದ್ಯರನ್ನೇ ನೋಡದ ಹೋಬಳಿ ಆಸ್ಪತ್ರೆ……ರೈತರ ಗೋಳು ಕೇಳುವವರು ಯಾರು?
ಆಲೂರು :ಆಲೂರು ತಾಲೂಕು ಕೆ. ಹೊಸಕೋಟೆ ಹೋಬಳಿ ಮಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲಿ ಒಂದು ಪಶು ಸಂಗೋಪನ ಆಸ್ಪತ್ರೆ ಕೆಲವು ವರ್ಷಗಳ ಹಿಂದೆಯೇ ನಿರ್ಮಾಣ ವಾಗಿದೆ.ಆದರೆ ಇದರ ಪರಿಸ್ಥಿತಿಯನ್ನು ನೋಡುವುದಾದರೆ ಈ ಆಸ್ಪತ್ರೆಗೆ 5 ವರ್ಷದಿಂದ ಯಾವುದೇ ಡಾಕ್ಟರ್ ಇಲ್ಲಿಗೆ ನೇಮಿಸಿರುವುದಿಲ್ಲ. ಇಲ್ಲಿ ಒಬ್ಬ ಸಹಾಯಕರು ಮಾತ್ರ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿರುತ್ತದೆ. ಈ ಹೋಬಳಿ ಮಟ್ಟದಲ್ಲಿ ಸುಮಾರು 40 ಹಳ್ಳಿಗಳು ಇರುವುದರಿಂದ ತುಂಬಾ ದೊಡ್ಡಮಟ್ಟದ ಜನ ಸಂಖ್ಯೆಯನ್ನು ಹೊಂದಿದೆ.
ಪ್ರತಿಯೊಂದು ಗ್ರಾಮದಲ್ಲಿ ಪ್ರತಿಯೊಂದು ಮನೇಲಿ ಸಹ ಬೆಲೆ ಬಾಳುವಂತ ಹಸುಗಳನ್ನು ಸಾಕಿಕೊಂಡಿದರೆ ಆದರೆ ಈ ಊರಿನ ಸಮಸ್ಯೆ ಎಂದರೆ…. ಈ ಆಸ್ಪತ್ರೆಗೆ 5 ವರ್ಷ ದಿಂದ ಯಾವ ಡಾಕ್ಟರ್ಗಳನ್ನು ನೇಮಕ ಮಾಡಿರುವುದಿಲ್ಲ. ಇದಕೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಗಮನಕ್ಕೆ ತಂದರು ಯಾಕೆ ಗಮನ ಹರಿಸುತ್ತಿಲ್ಲ.ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತು ಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದರು.
ಅದರಿಂದ ದಯವಿಟ್ಟು ಮೇಲಧಿಕಾರಿಗಳು ಈ ಆಸ್ಪತ್ರೆ ಬಗ್ಗೆ ಗಮನ ಕೊಟ್ಟು ತುರ್ತಾಗಿ ಒಬ್ಬ ಡಾಕ್ಟರ್ ಗಳ್ಳುನೂ ನೇಮಕ ಮಾಡಿ ಇದಕೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಬೇಕು ಎಂದು ರೈತ ಸಂಘದ ಅಧ್ಯಕ್ಷರು ಎಚ್‌ಎಸ್ ಮೋಹನ್,ಕಾರ್ಯದರ್ಶಿ ಜಯಣ್ಣ, ಭಾರತೀಯ ಪರಿವರ್ತನ ಸಂಘದ ತಾಲೂಕು ಅಧ್ಯಕ್ಷರು ಸತೀಶ್ ಹರಿಹಳ್ಳಿ, ಮಲ್ಲಾಪುರ ಗ್ರಾಮ ಪಂಚಾಯತಿ ಸದಸ್ಯರುಗಳು.. ಕೃಷ್ಣಪ್ಪ ಇಂದ್ರೇಶ ಸುರೇಶ್,ಕುಮಾರ್, ಕಾರ್ತಿಕ್ ಪರಮೇಶ್, ಸತೀಶ್ ಇನ್ನು ಮುಂತಾದವರು ಸಂಬಂಧಪಟ್ಟ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿ ಎಚ್ಚರಿಕೆ ನೀಡಿದ್ದಾರೆ.