ಪುತ್ತೂರಿನಲ್ಲಿ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
ಇಂಧನ ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ ಹಮ್ಮಿಕೊಂಡಿರುವ 100ನೋಟ್ ಔಟ್ ಎನ್ನುವ ಪ್ರತಿಭಟನಾ ಕಾರ್ಯಕ್ರಮದ ಅಂಗವಾಗಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಕಾವು ಹೇಮನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ವಿನೂತನವಾಗಿ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾವು ಹೇಮನಾಥ್ ಶೆಟ್ಟಿಯವರು ಮಾತಾಡಿ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೂಲಕ ಜನತೆಯ ಹಣವನ್ನು ಲೂಟಿಗೈಯ್ಯುತ್ತಿದೆ, ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲ ೧೪೦ ಡಾಲರ್ ಆಗಿದ್ದರೂ ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಾಗದಂತೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನೋಡಿಕೊಂಡಿದ್ದಾರೆ. ಬೆಲೆ ಏರಿಕೆ ಮಾಡದೇ ಜನಪರ ಆಡಳಿತ ನೀಡಿದ್ದರು.
ಆದರೆ ಕೇಂದ್ರದ ಮೋದಿ ಸರ್ಕಾರವು ಕಚ್ಚಾ ತೈಲದ ಬೆಲೆಯು ಇಂದು 70 ಡಾಲರ್ ಗೆ ಇಳಿದಿದ್ದರೂ ದೇಶದಲ್ಲಿ ತೈಲ ಬೆಲೆ ಶತಕ ದಾಖಲಿಸಿದೆ ಎಂದು ಹೇಳಿದರು.
ಬ್ಯಾಂಡ್ ವಾದ್ಯಘೋಷಗಳೊಂದಿಗೆ ದರ್ಭೆ ಸರ್ಕಲ್ ನಲ್ಲಿರುವ ಇಂಡಿಯನ್ ಈಯಿಲ್ ಪೆಟ್ರೋಲ್ ಪಂಪ್ ನಲ್ಲಿ ಪ್ರಾರಂಭವಾದ ಪ್ರತಿಭಟನೆ ಮೆರವಣಿಗೆ ಮೂಲಕ ಪಕ್ಕದ ಹಿಂದುಸ್ತಾನ್ ಪೆಟ್ರೊಲ್ ಪಂಪ್ ನಲ್ಲಿ ಕೊನೆಗೊಂಡಿತು.
ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ,ಯುವ ಮುಖಂಡ ಕಮಲೇಶ್ ದೋಳ, ಪುತ್ತೂರು ಪುರಸಭೆ ಮಾಜಿ ಉಪಾಧ್ಯಕ್ಷರಾದ ಲಾನ್ಸೀ ಮಸ್ಕರೇನಸ್ ಮತ್ತಿರರು ಉಪಸ್ಥಿತರಿದ್ದರು.