ಪುತ್ತೂರಿನ ಕೃಷ್ಣನಗರ ಚರ್ಚ್ ಬಳಿಯ ಅಂಗಡಿಗಳಿಂದ ಕಳವು
ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೃಷ್ಣನಗರ ಚರ್ಚ್ ಬಳಿಯ ಎರಡು ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ಸೆ.23 ರಂದು ಬೆಳಕಿಗೆ ಬಂದಿದೆ.
ಕೃಷ್ಣನಗರ ಬಳಿಯ ಗೋಪಾಲ ಎಂಬವರ ಅಂಗಡಿಗೆ ಕಳ್ಳರು ಪಕ್ಕದ ಮರ ಏರಿ ಶೀಟ್ ಜಾರಿಸಿ ಒಳನುಗ್ಗಿ ಅಂಗಡಿಯಲ್ಲಿ ದಾಸ್ತಾನಿದ್ದ 2 ಗೋಣಿ ಸಿಗರೇಟು ಪ್ಯಾಕೇಟ್ ಮತ್ತು ಗುಡ್ಕಾ ಹಾಗು ಡ್ರಾವರ್ ನಲ್ಲಿ ಇದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ.
ಪಕ್ಕದ ಲತೀಫ್ ಎಂಬವರ ತರಕಾರಿ ಅಂಗಡಿಯ ರೋಲಿಂಗ್ ಶೆಟರ್ ಮೂಲಕ ಒಳನುಗ್ಗಿದ ಕಳ್ಳರು ಡಬ್ಬದಲ್ಲಿ ಇಟ್ಟಿದ್ದ ರೂ.300 ಅನ್ನು ಕಳವು ಮಾಡಿದ್ದಾರೆ.ಗೋಪಾಲ ಅವರು ಹಲವು ವರ್ಷಗಳ ಹಿಂದೆ ಸಾಲ್ಮರ ಕ್ರಾಸ್ ಬಳಿ ಗೂಡಂಗಡಿಯನ್ನು ಹೊಂದಿದ್ದ ವೇಳೆ ಅವರ ಗೂಡಂಗಡಿ ಬೆಂಕಿಗಾಹುತಿ ಆಗಿತ್ತು. ಅದಾದ ಬಳಿಕ ರಸ್ತೆ ಅಗಲೀಕರಣದಿಂದ ಅವರು ಅಂಗಡಿಯನ್ನು ಕೃಷ್ಣನಗರಕ್ಕೆ ಸ್ಥಳಾಂತರಿಸಿದ್ದರು. ಆ ಬಳಿಕ ಅಂಗಡಿಯಿಂತ್ತೂರುದ ಕಳವಾಗಿತ್ತು.
ಇದೀಗ ಎರಡನೇ ಬಾರಿ ಕಳ್ಳತನ ನಡೆದಿದೆ.ಪುತ್ತೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.