ಪುತ್ತೂರಿನ ಚೆಲ್ಯಡ್ಕ ಸೇತುವೆ ಎರಡನೇ ಬಾರಿಗೆ ಮುಳುಗಡೆ
ಪುತ್ತೂರು:ತಾಲೂಕಿನ ಏಕೈಕ ಮುಳುಗು ಸೇತುವೆಯಾಗಿರುವ ಚೆಲ್ಯಡ್ಕ ಸೇತುವೆ ಈ ವರ್ಷದ ಮಳೆಗಾಲದಲ್ಲಿ ಎರಡನೇ ಬಾರಿಗೆ ಮುಳುಗಡೆಯಾಗಿದೆ.
ಜು.18ರಂದು ಮುಂಜಾನೆಯಿಂದಲೇ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿದ್ದು ಸೇತುವೆಯು ಮುಳುಗಡೆಯಾಗಿದೆ. ಇದರಿಂದಾಗಿ ದೇವಸ್ಯ ಮೂಲಕ ಸಂಚರಿಸಬೇಕಾದ ಖಾಸಗಿ ಬಸ್‌ಗಳು ಹಾಗೂ ಇತರೇ ವಾಹಗಳಿಗೆ ಅಡಚಣೆ ಉಂಟಾಗಿದ್ದು ಸಂಟ್ಯಾರು ರಸ್ತೆಯ ಮೂಲಕ ಸುತ್ತುವರಿದು ಚಲಿಸುವಂತಾಗಿದೆ.