ಪುತ್ತೂರಿನ ನೈತ್ತಾಡಿಯ ಕಲ್ಲಗುಡ್ಡೆಯಲ್ಲಿ ಅಕ್ರಮ ಮದ್ಯ ಮಾರಾಟ: ಭಾರಿ ಪ್ರಮಾಣದ ಮದ್ಯ ವಶ
ಪುತ್ತೂರು: ಮನೆಯ ಸಮೀಪದ ಗುಡ್ಡೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಕೆಮ್ಮಿಂಜೆಯ ನೈತ್ತಾಡಿಯ ಕಲ್ಲಗುಡ್ಡೆ ಎಂಬಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದು, ರೂ. 26,118 ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಕೆಮ್ಮಿಂಜೆ ಗ್ರಾಮದ ನೈತಾಡಿ ದಿ.ಬಟ್ಯಪ್ಪ ಪೂಜಾರಿ ಅವರ ಪುತ್ರ ಬಾಬು ಪೂಜಾರಿ(48ವ) ಮತ್ತು ಕಲ್ಲಗುಡ್ಡೆ ನಿವಾಸಿ ಚಲ್ಲ ಎಂಬವರ ಪುತ್ರ ಗಣೇಶ್(32ವ)ರವರು ಬಂಧಿತ ಆರೋಪಿಗಳು. ಪೊಲೀಸರು ಕಲ್ಲಗುಡ್ಡೆಯಲ್ಲಿ ಮನೆಯ ಹಿಂಬದಿಯ ಗುಡ್ಡದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿದಾಗ ಆರೋಪಿಗಳನ್ನು ಬಂಧಿಸಿದರು. ಈ ವೇಳೆ ಅಲ್ಲಿದ್ದ ಒರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಕ್ಸಿ ಎಂದು ಬರೆದಿರುವ ತಲಾ 180ಎಂ.ಎಲ್ ನ ಮದ್ಯ ತುಂಬಿದ ರೂ. 15,260 ಮೌಲ್ಯದ 218 ಸ್ಯಾಚೆಟ್‌ಗಳು, ಒರಿಜಿನಲ್ ಚಾಯ್ಸ್ ತಲಾ 90 ಎಂ.ಎಲ್‌ನ ಮಧ್ಯ ತುಂಬಿದ ರೂ.2065 ಮೌಲ್ಯದ 59 ಸ್ಯಾಚೆಟ್‌ಗಳು, ಬ್ಯಾಗ್‌ಬೈಪರ್ ವಿಸ್ಕಿ ಎಂದು ಬರೆದಿರುವ ತಲಾ 180 ಎಂ.ಎಲ್‌ನ ಮದ್ಯ ತುಂಬಿದ ರೂ.1590 ಮೌಲ್ಯದ 15 ಸ್ಯಾಚೆಟ್‌ಗಳು, ಬ್ಲಾಕ್ ಪೊರ್ಟ್ ಎಂದು ಬರೆದಿರುವ ತಲಾ 330 ಎಂ.ಎಲ್‌ನ ಬಿಯರ್ ತುಂಬಿದ ರೂ.1488 ಮೌಲ್ಯದ 24 ಬಾಟಲಿಗಳು, 650 ಎಂ.ಎಲ್‌ನ ರೂ.2180 ಮೌಲ್ಯದ 19 ಬಾಟಲಿಗಳು, ಆಪಿಸರ್‍ಸ್ ಚಾಯ್ಸ್ ಸ್ಟಾರ್ ಸುಪ್ರಿಂ ವಿಸ್ಕಿ ಎಂದು ಬರೆದಿರುವ ತಲಾ 180 ಎಂ.ಎಲ್‌ನ ಮದ್ಯ ತುಂಬಿದ ರೂ. 430 ಮೌಲ್ಯದ 5 ಸ್ಯಾಚೆಟ್‌ಗಳು, ಡಿಎಸ್ಪಿ ಬ್ಲಾಕ್ ಡಿಲೆಕ್ಸ್ ವಿಸ್ಕಿ ಬರೆದಿರುವ 180 ಎಂ.ಎಲ್‌ನ ರೂ. 525 ಮೌಲ್ಯದ 3 ಬಾಟಲಿಗಳು, ಎಂ.ಸಿ ಎಂದು ಬರೆದಿರುವ ತಲಾ 180 ಎಂ.ಎಲ್‌ನ ಮದ್ಯ ತುಂಬಿದ 1,780 ಮೌಲ್ಯದ 9 ಬಾಟಲಿಗಳನ್ನು ಮತ್ತು ಮದ್ಯ ಮಾರಾಟ ಮಾಡಿ ಬಂದ ರೂ.800 ನಗದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಒಟ್ಟು ರೂ. 26,118 ಮೌಲ್ಯವಾಗಿದೆ. ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಜಂಬೂರಾಜ್ ಮಹಾಜನ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.