ಪುತ್ತೂರು ದೇವಳದ ವಠಾರದಲ್ಲಿ ಮೃತದೇಹ ಪತ್ತೆ
ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳ ವಠಾರದಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ವಿಟ್ಲ ಮೂಲದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಪುತ್ತೂರು: ಮಹಾಲಿಂಗೇಶ್ವರ ದೇವಳ ವಠಾರದಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ವೃದ್ದರೊಬ್ಬರು ಅಸು ನೀಗಿದ ಘಟನೆ ನಡೆದಿದೆ. ಮೃತರನ್ನು ಕೇಶವ ನಾಯ್ಕ ಎಂದು ಗುರುತಿಸಲಾಗಿದೆ. ಮೃತರ ಸಂಬಂಧಿಕರು ವಿಟ್ಲ ಮೂಲದವರು ಎನ್ನಲಾಗಿದೆ. ಸಂಬಂಧಿಕರು ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪೊಲೀಸರು ಮನವಿ ಮಾಡಿದ್ದಾರೆ.