ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಯುವನಟ ಶಶಿರಾಜ್

ಕನಸು ಕಾಣುವುದು ಬಹಳ ಸುಲಭ ಆ ಕನಸನ್ನು ನನಸಾಗುವುದು ಕಷ್ಟ. ಗುರಿ, ಛಲ, ಸತತ ಪರಿಶ್ರಮ ನಮ್ಮಲ್ಲಿದ್ದರೆ ನಾವು ಏನು ಬೇಕಾದರೂ ಸಾಧಿಸಬಹುದು. ಸಾವಿರ ಕಷ್ಟಗಳ ಮಧ್ಯೆಯು ಗುರಿ ತಲುಪುತ್ತೇನೆ ಎಂಬ ಛಲ ಗುರಿ ತಲುಪಲು ಎಷ್ಟು ಸಾಧ್ಯವೋ ಅಷ್ಟು ಪರಿಶ್ರಮ ನಮ್ಮಲ್ಲಿರಬೇಕು ಆಗ ಮಾತ್ರ ನಮ್ಮ ಭವಿಷ್ಯದ ದಾರಿಸುಗಮವಾಗಿರುತ್ತದೆ.ಇಂತಹ ಸವಾಲನ್ನು ಗೆದ್ದು ತನ್ನ ಕನಸನ್ನು ನನಸು ಮಾಡಿಕೊಂಡವರಲ್ಲಿ ಶಶಿರಾಜ್ ಕೂಡಾ ಒಬ್ಬರು.

ಮೂಲತಃ ಬೆಂಗಳೂರಿನವರಾದ ಶಶಿರಾಜ್ ಒಬ್ಬ ಕಲಾವಿದ, ನಟ. ಇವರ ತಂದೆ ಬಿ ರಾಜಕುಮಾರ್ ತಾಯಿ ಉಮಾರಾಣಿ. ಶಶಿರಾಜ್ ತನ್ನ ಪ್ರಾಥಮಿಕ ಶಿಕ್ಷಣವನ್ನು ವಿದ್ಯಾಶಂಕರಿಯಲ್ಲಿ ಪೂರ್ಣಗೊಳಿಸಿ ಇವರು ನಂತರ ಬಿ.ಸಿ ಎ ಪದವಿಯನ್ನು ಪಡೆದುಕೊಂಡರು.ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇವರು ಚಿಕ್ಕ ವಯಸ್ಸಿನಲ್ಲಿ ಕಾಲೇಜು ಶಿಕ್ಷಣದ ಸಂದರ್ಭದಲ್ಲಿ ಚಿಕ್ಕ ನಾಟಕವನ್ನು ಪುಟ್ಟ ಪರದೆಯ ಮೂಲಕ ಪ್ರದರ್ಶಿಸುತ್ತಿದ್ದರು. ಇದೇ ಮುಂದೆ ಆಸಕ್ತಿಯಾಗಿ ಚಿಗುರೊಡೆದು ಇಂದು ದೊಡ್ಡ ಪರದೆಯಲ್ಲಿ ಕಾಣುವಂತೆ ಮಾಡಿದ್ದು ಇವರ ಪರಿಶ್ರಮ ಎಂದೇ ಹೇಳಬಹುದು.

ಶಶಿರಾಜ್ ಒಬ್ಬ ಧಾರಾವಾಹಿ ನಟ.ಪ್ರಸುತ್ತ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಸತ್ಯ” ಧಾರಾವಾಹಿಯಲ್ಲಿ “ಭಾಲ” ಎಂಬ ಪಾತ್ರದಾರಿಯಾಗಿ ನಟಿಸುತ್ತಿದ್ದಾರೆ. ಹಾಗೆಯೇ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಪ್ರೇಮಲೋಕ” ಎಂಬ ಧಾರಾವಾಹಿಯಲ್ಲಿಯೂ ನಟಿಸಿದ ಹೆಮ್ಮೆ ಇವರದ್ದು.ನಟನೆಯಿಂದ ಹೆಸರು ಗಳಿಸಬೇಕು ಎಂಬುವುದು ಇವರ ಮನದಾಸೆಯಾಗಿದೆ.ಇವರ ಈ ಇಲ್ಲಾ ಆಸೆಗಳು ಕನಸುಗಳು ನನಸಾಗಲಿ ಎಂಬುವುದೇ ನಮ್ಮ ಆಶಯ.

ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು.

Related Posts

Leave a Reply

Your email address will not be published.