ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಪಡುಬಿದ್ರಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ವ್ಯಾಪಕ ಹಿಂಸಾಚಾರದ ವಿರುದ್ಧ ಪಡುಬಿದ್ರಿ ಮುಖ್ಯಪೇಟೆಯ ಕಾರ್ಕಳ ಸರ್ಕಲ್ ಬಳಿ ನೂರಾರು ಕಾಪು ತಾಲೂಕು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಭೂ ಸುರಕ್ಷಾ ಪ್ರಮುಖ್ ರಮೇಶ್ ಕಲ್ಲೋಟ್ಟೆ ಮಾತನಾಡಿ, ಬಾಂಗ್ಲಾದೇಶಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಬಾರತದಲ್ಲಿ ಏಕೆ ಪ್ರತಿಭಟನೆ ನಡೆಸುತ್ತಾರೆ ಎಂಬ ಮಾತು ಕೇಳುತ್ತಿರಬಹುದು. ಈ ಮಾತು ಸತ್ಯ…ಕಾರಣ ಇಷ್ಟೇ ಮುಂದಿನ ದಿನದಲ್ಲಿ ಇಂಥಹ ಘಟನೆಗಳು ಭಾರತದಲ್ಲಿ ನಡೆಯಬಾರದು ಎಂಬ ನಿಟ್ಟಿನಲ್ಲಿ ಎಲ್ಲೆಡೆ ಹಿಂದೂ ಜಾಗರಣಾ ವೇದಿಕೆಯವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ. ಅನಿವಾರ್ಯ ಸ್ಥಿತಿ ಬಂದರೆ ಬಾಂಗ್ಲಕ್ಕೂ ತೆರಳಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟಿಸಲು ಸಿದ್ಧ ಎಂದರು.
ಈ ಸಂದರ್ಭ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಉಚ್ಚಿಲ, ತಾಲೂಕು ಅಧ್ಯಕ್ಷ ಶಶಿಧರ ಹೆಗ್ಡೆ ಅಡ್ವೆ, ಪಡುಬಿದ್ರಿ ವಲಯಾಧ್ಯಕ್ಷ ಪ್ರತೀಕ್ ಕೋಟ್ಯಾನ್ ನಂದಿಕೂರು, ಶಿರ್ವ ವಲಯಾಧ್ಯಕ್ಷ ರಕ್ಷಿತ್ ಶಿರ್ವ, ಗುರುಪ್ರಸಾದ್ ಸೂಡಾ, ಪ್ರೀತಂ ಶಿರ್ವ,ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನೀತಾ ಗುರುರಾಜ್, ಶಿವಪ್ರಸಾದ್ ಶೆಟ್ಟಿ, ಉಮಾನಾಥ್ ಮೆಂಡನ್, ರೀತೇಶ್ ಫಲಿಮಾರು, ಸುಹಾಸ್ ಶೆಟ್ಟಿ ನಟವರಿಯ, ರಾಘವೇಂದ್ರ ಸುವರ್ಣ ಪಲಿಮಾರು, ಲೋಕೇಶ್ ಪಲಿಮಾರು ಮತ್ತಿತರರಿದ್ದರು. ಪ್ರತಿಭಟನಾ ಸ್ಥಳದಲ್ಲಿ ಬಂದೋಬಸ್ತ್ ಪಡುಬಿದ್ರಿ ಠಾಣಾ ಪಿಎಸ್ ಐ ಅಶೋಕ್ ಕುಮಾರ್ ನಿರ್ವಹಿಸಿದರು.