ಬಿಸಿಯೂಟ ನೌಕರರನ್ನು ನಿರ್ಲಕ್ಷಿಸುವುದು ಮಹಿಳಾ ದೌರ್ಜನ್ಯವಾಗಿದೆ : ಬಿ.ಎಂ. ಭಟ್ ಹೇಳಿಕೆ

ಪುತ್ತೂರು : ಕಳೆದ 20 ವರ್ಷಗಳಿಂದ ಅತೀ ಕಡಿಮೆ ಸಂಬಳದಲ್ಲಿ ಕನಿಷ್ಟ ವೇತನವೂ ಸಿಗದೆ ಶಾಲಾ ಮಕ್ಕಳಿಗೆ ಪ್ರೀತಿಯಿಂದ ಅಡುಗೆ ತಯಾರಿಸಿ ಬಡಿಸುತ್ತಿರುವ ಬಿಸಿಯೂಟ ನೌಕರರ ಬಗ್ಗೆ ಸರಕಾರದ ನಿರ್ಲಕ್ಷ ಕೂಡ ಸರಕಾರದ ಮಹಿಳಾ ದೌರ್ಜನ್ಯ ಆಗಿದೆ ಎಂದು ಹಿರಿಯ ಕಾರ್ಮಿಕ ಮುಖಂಡರಾದ ಬಿ.ಎಂ.ಭಟ್ ಹೇಳಿದರು.

ಅವರು ಸೆ.20 ರಂದು ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರದಾಸೋಹ ನೌಕರರ ಸಮಾವೇಶವನ್ನುದ್ದೇಶಿಸಿ ಮಾತಾಡಿ ಕೆಲವು ಅಸಂಘಟಿತ ಕಾರ್ಮಿಕರಿಗೆ ಕೊರೋನಾ ಪ್ಯಾಕೇಜು ನೀಡಿದ ಸರಕಾರ ಈ ಮಹಿಳಾ ನೌಕಕರಿಗೆ ಯಾವುದೇ ಪರಿಹಾರ ನೀಡಿಲ್ಲ ಮಾತ್ರವಲ್ಲ ಕಳೆದ 6 ತಿಂಗಳಿಂದ ಸಂಬಳವನ್ನೂ ನೀಡದೆ ಶೋಷಿಸುತ್ತಿರುವುದು ಖಂಡನೀಯ ಎಂದರು. ಶಾಲೆಯ ಮಕ್ಕಳ ಹಸಿವೆ ತಣಿಸಲು ಮದ್ಯಾಹ್ನದ ಊಟ ಬಡಿಸುತ್ತಾ ತಾಯ ಸ್ಥಾನ ತುಂಬುವ ಮಹಿಳೆಯರ ತಮ್ಮ ಸ್ವಂತ ಮಕ್ಕಳಿಗೆ ಊಟ ನೀಡಬೇಕೆಂಬುದನ್ನು ಅರ್ಥಮಾಡಿಕೊಂಡು ಬಾಕಿಯಾದ ಸಂಬಳವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ನಿರಂತರ ಬೆಲೆ ಏರಿಕೆಯ ನಡುವೆ ಬದುಕಲಾರದ ದುಸ್ತಿತಿಗೆ ತಲುಪಿದ ಬಿಸಿಯೂಟ ನೌಕರರ ವೇತನವನ್ನು ಕನಿಷ್ಟ ಮಾಸಿಕ ರೂ.10,000 0ಕ್ಕಾದರೂ ಏರಿಸಬೇಕಿದೆ ಎಂದವರು ಸರಕಾರವನ್ನು ಒತ್ತಾಯಿಸಿದರು.

ಸಭೆಯ ಬಳಿಕ ಪುತ್ತೂರು ಎಸಿಯವರ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು. ಈ ಸಂದರ್ಭ ಸಂಘಟನೆಯ ಮುಖಂಡರುಗಳಾದ ಕೇಶವ ಗೌಡ, ಜಯಂತಿ, ಸುಲೋಚನ ,ಸುಧಾ, ರೇವತಿ ಮೊದಲಾದವರು ಉಪಸ್ಥಿತರಿದ್ದರು. ಎಸಿ ಮನವಿ ಸ್ವೀಕರಿಸಿ ಬಿಸಿಯೂಟ ನೌಕರರಲ್ಲಿ ಇತರ `ಡಿ’ ಗ್ರೇಡ್ ಕೆಲಸವನ್ನು ಮಾಡಿಸದಂತೆ ಎಚ್ಚರಿಸಿ ಬಿ.ಇ ಅವರಿಗೆ ತಕ್ಷಣ ನೋಟಿಸ್ ಕಳುಹಿಸಿದರು.

Related Posts

Leave a Reply

Your email address will not be published.