ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರು : ರಂಜಿತ್ ಪೂಜಾರಿ

ಮೂಡುಬಿದಿರೆ : ಭೂ ಅಭಿವೃದ್ಧಿಗೆ ಸಂಬಂಧಿಸಿದ ಉದ್ಯಮಗಳನ್ನು ನಡೆಸುತ್ತಿರುವ ಅರ್ಥ್ ಮೂವರ್ಸ್ ಮಾಲೀಕರು ಡೀಸೆಲ್ ಬೆಲೆ ಹೆಚ್ಚಳ, ನಿರ್ವಹಣಾ ವೆಚ್ಚ, ಚಾಲಕರ ವೇತನ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿದ್ದು ಉದ್ಯಮದ ಉಳಿವಿಗಾಗಿ ಹತ್ತು ವರ್ಷಗಳ ಬಳಿಕ ಜೆಸಿಬಿ, ಟಿಪ್ಪರ್, ಹಿಟಾಚಿ ಬಾಡಿಗೆ ದರ ಪರಿಷ್ಕರಿಸಿರುವುದಾಗಿ ಅರ್ಥ್ ಮೂವರ್ಸ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ರಂಜಿತ್ ಪೂಜಾರಿ ಹೇಳಿದರು.

ಮೂಡಬಿದರೆಯಲ್ಲಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಪ್ರತೀ ಗಂಟೆಗೆ ಹಿಟಾಚಿ ದರ 1300, ಜೆಸಿಬಿ ದರ 1200, ಸಣ್ಣ ಹಿಟಾಚಿ 1100, ಟಿಪ್ಪರ್ ದಿನವೊಂದಕ್ಕೆ 7 ಸಾವಿರ ನಿಗದಿಪಡಿಸಲಾಗಿದೆ. ಪ್ರತೀ 5 ಕಿ.ಮೀ ಒಳಗೆ ಹಿಟಾಚಿ ಸಾಗಾಟ ವೆಚ್ವನ್ನು 2ಸಾವಿರ ರೂ ಏರಿಕೆ ಮಾಡಲಾಗಿದೆ. ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಒಕ್ಕೂಟ ರಚಿಸಲಾಗಿದೆ. ಈ ವಾಪ್ತಿಯಲ್ಲಿ ದರವು ಅನ್ವಯವಾಗಲಿದೆ. ಪ್ರತಿಯೊಬ್ಬರೂ ಒಕ್ಕೂಟ ನಿಗದಿಪಡಿಸಿದ ದರದಲ್ಲಿ ಕೆಲಸ ನಿರ್ವಹಿಸಬೇಕು. ನೊಂದಾಯಿತ ಗಾಡಿಗಳನ್ನು ಹೊರತುಪಡಿಸಿ ಬೇರೆ ಗಾಡಿಗಳು ಈ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವಂತಿಲ್ಲ. ಬೇರೆ ಜಿಲ್ಲೆ ಅಥವಾ ರಾಜ್ಯದಿಂದ ಬಾಡಿಗೆಗೆ ಅಥವಾ ಗುತ್ತಿಗೆಗೆ ಪಡೆಯುವಂತಿಲ್ಲ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷ ವಿನಯ ಹೆಗ್ಡೆ, ಬಂಟ್ವಾಳ ವಲಯ ಅಧ್ಯಕ್ಷ ರಂಜಿತ್‍ರಾವ್ ಹಾಗೂ ಆಲ್ವಿನ್ ಮಿನೇಜಸ್, ಆದಿರಾಜ ಜೈನ್ ಮತ್ತಿತರರು ಉಪಸ್ಥಿತರಿದ್ದರು .

Related Posts

Leave a Reply

Your email address will not be published.