ಬೆಳಗಾವಿಯಲ್ಲಿ ಮಾಜಿ ಕೇಂದ್ರ ಸಚಿವ ಬಾಬಾ ಗೌಡ ಪಾಟೀಲ್ ಅವರ ನೆನಪು ಹಾಗೂ ಶ್ರದ್ಧಾಂಜಲಿ
ಕರ್ನಾಟಕದ ಹಿರಿಯ ರೈತ ನಾಯಕ ರೈತಸಂಘದ ಮೊದಲ ಶಾಸಕ ಮಾಜಿ ಕೇಂದ್ರ ಸಚಿವರಾದ ಬಾಬಾ ಗೌಡ ಪಾಟೀಲ್ ರವರ ನೆನಪು ಹಾಗೂ ಶ್ರದ್ಧಾಂಜಲಿ ಸಭೆಯನ್ನು ಬೆಳಗಾವಿಯ ಕೆ.ಪಿ.ಟಿ.ಸಿ.ಎಲ್ ಸಭಾಭವನದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಪ್ರಾಸ್ತಾವಿಕ ಗೌರವಾಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಮಾಜಿ ಹೋರಾಟಗಾರರಾದ ಎಸ್.ಆರ್.ಹೀರೇಮಠ್, ಮಾಜಿ ಸಚಿವರಾದ ಶಶಿಕಾಂತ್ ನಾಯಕ್, ಕಾರ್ಯಾಧ್ಯಕ್ಷರುಗಳಾದ ಎಮ್.ರಾಮು ಚೆನ್ನಪಟ್ಟಣ, ಮುತ್ತಪ್ಪ ಕೋಮಾರ್, ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ಧನಗೌಡ ಮೋದಿಗಿ, ಬಾಬಾ ಗೌಡ ಪಾಟೀಲ್‌ರವರ ಮಕ್ಕಳಾದ ಪ್ರಕಾಶ್ ಆರ್.ಪಾಟೀಲ್ ಮತ್ತು ಪರ್ವತ್ ಆರ್ ಪಾಟೀಲ್ ಶ್ರೀಮತಿ ಪಾರ್ವತಮ್ಮ ಕಳಸಣ್ಣನವರ್, ವಿಭಾಗೀಯ ಉಪಾಧ್ಯಕ್ಷರುಗಳಾದ ಪರಶುರಾಮ್ ಮಂಟೂರ್, ಮಲ್ಲಿಕಾರ್ಜುನ ಸಂಕನ ಗೌಡ, ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಶ್ರೀ ಶೈಲನಾಯಕ್, ಗದಗ ಜಿಲ್ಲಾಧ್ಯಕ್ಷರಾದ ಚೌಡರೆಡ್ಡಿ ಹಾಗೂ ಬೆಳಗಾವಿ ಜಿಲ್ಲೆಯ ಹಿರಿಯ ರೈತಮುಖಂಡರಾದ ಕಲ್ಯಾಣ ರಾವ್ ಮುಚಳಾಂಬಿ, ಶಿವಪುತ್ರ ಜಕ್ಬಾಳ್, ಮಲ್ಲಿಕಾರ್ಜುನ ವಾಲಿ, ಶ್ರೀ ಕಾಂತ್ ಶಿರಗಟ್ಟಿ, ಪತ್ರಕರ್ತ ವೆಂಕನ್ ಗೌಡ ಪಾಟೀಲ್ ಹಾಗೂ ಹಲವಾರು ಜಿಲ್ಲಾ ,ತಾಲೂಕು ರೈತಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ನಡೆಸಿದರು. ವಂದನಾರ್ಪಣೆಯನ್ನು ಬೆಳಗಾವಿ ಜಿಲ್ಲಾಧ್ಯಕ್ಷರಾದ ಈರನ ಗೌಡ ಪಾಟೀಲ್ ನಿರ್ವಹಿಸಿದರು.