ಬೈಕಂಪಾಡಿಯಲ್ಲಿರುವ ಓಶಿಮಾ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್ : ಕಂಪನಿಯ ರಾಯಭಾರಿಯ ಪರಿಚಯ, ಪ್ರಚಾರ ಅಭಿಯಾನದ ಉದ್ಘಾಟನೆ
ಮಂಗಳೂರಿನ ಬೈಕಂಪಾಡಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪ್ರತಿಷ್ಠಿತ ಕಂಪನಿಯಾದ ಓಶಿಮಾ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್‍ನ ವೆಲ್ಡಿಂಗ್ ಎಲೆಕ್ಟ್ರೋಡ್ ಮತ್ತು ಇನ್ವರ್ಟರ್ ಬ್ಯಾಟರಿ ತಯಾರಕರು ಬೈಕಂಪಾಡಿಯ ಕೆನರಾಇಂಡಸ್ಟ್ರೀಸ್ ಅಸೋಸಿಯೇಶನ್‍ನಲ್ಲಿ, ತನ್ನ ಕಂಪನಿಯ ರಾಯಭಾರಿಯನ್ನು ಪರಿಚಯಿಸುವ ಹಾಗೂ ಪ್ರಚಾರ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಂಗಳೂರಿನ ತರ್ಜಾನಿ ಕಮ್ಯುನಿಕೇಶನ್ಸ್ ಪ್ರೈವೇಟ್ ಲಿಮಿಟೆಡ್‍ನ ಎಂ.ಡಿ. ಶೇಷಗಿರಿ ಕೆ.ಜಿ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಇಂಡಸ್ಟ್ರೀಸ್ ಅಸೋಸಿಯೇಶನ್ ಅಧ್ಯಕ್ಷರಾದ ಐಸಾಕ್ ವಾಸ್ ಅವರು ವಹಿಸಿದ್ದರು.
ಓಶಿಮಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ. ರಾಮಚಂದ್ರ ಭಟ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರಸ್ತಾವನೆಯನ್ನು ನೀಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀಮತಿ ನಿರ್ಮಲ ಕುಂದರ್, ಡೈರೆಕ್ಟರ್- ಆಪರೇಶನ್ಸ್ ಶ್ರೀಶರತ್ ರವಿ, ಡೈರೆಕ್ಟರ್ ಶ್ರೀಮತಿ ಚಿತ್ರಲೇಖ ಆರ್. ಭಟ್ ಹಾಗೂ ಹಲವಾರು ಗ್ರಾಹಕರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.