ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಲೇಡಿಗೋಷನ್ ಆಸ್ಪತ್ರೆಗೆ ವಾಟರ್ ಪ್ಯೂರಿಫೈಯರ್ -ಕಮ್ -ಹೀಟರ್ನ ನ ಕೊಡುಗೆ
ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ವಾಟರ್ ಪ್ಯೂರಿಫೈಯರ್ ಕಂ ಹೀಟರ್ ನ್ನು ಭಾರತೀಯ ಜೀವ ವಿಮಾ ನಿಗಮವು ಕೊಡುಗೆಯಾಗಿ ನೀಡಿದೆ. ಈ ಕಾರ್ಯ ಮಾದರಿಯಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾ ಪ್ರಸಾದ್ ಅವರು ಹೇಳಿದರು. ಭಾರತೀಯ ಜೀವವಿಮಾ ನಿಗಮದ 65ನೇ ವರ್ಷಾಚರಣೆ ಸಂದರ್ಭದಲ್ಲಿ ಆಸ್ಪತ್ರೆಯ ಸುಪರಿಂಟೆಂಡೆಂಟ್ ಅವರು ವಾಟರ್ ಪ್ಯುರಿಫಯ್ಯರ್ ಕಂ ಹೀಟರ್ ಅನ್ನು ಸ್ವೀಕರಿಸಿ ಮಾತನಾಡಿದರು. ನಿಗಮದ ಮಂಗಳೂರು ಶಾಖೆಯ ಹಿರಿಯ ಪ್ರಬಂಧಕರಾದ ಶ್ರೀ ಎಚ್ ಸುಕೇಶ್ ರವರು ಸುಪರಿಂಟೆಂಡೆಂಟ್ ಅವರಿಗೆ ವಾಟರ್ ಪ್ಯುರಿಫಯಾರ್ ಕಂ ಹೀಟರ್ ನ್ನು ಹಸ್ತಾಂತರಿಸಿದರು. ಭಾರತೀಯ ಜೀವವಿಮಾ ನಿಗಮ ಸಾಮಾಜಿಕ ಅಭಿವೃದ್ಧಿಯ ಪಥದಲ್ಲಿ ಸಾಗಿದ್ದು ಅಪಾರ ಕೊಡುಗೆಯನ್ನು ಅರ್ಹರಿಗೆ ನೀಡಲಾಗಿದೆ ಎಂದರು. ಮಂಗಳೂರು ಶಾಖೆ 2, ಕಂಕನಾಡಿ ಶಾಖೆ, ಪಾಂಡೇಶ್ವರ ಶಾಖೆಗಳ ಪ್ರಬಂಧಕರುಗಳಾದ ಶ್ರೀ ಆರ್ ಕೆ ಹೆಗ್ಡೆ, ಸುಬ್ರಮಣ್ಯ ಭಟ್ ಹಾಗೂ ಬಿ ಎಸ್ ಕುಮಾರ್ ಮತ್ತು ಉಪ ಶಾಖಾ ವ್ಯವಸ್ಥಾಪಕರುಗಳಾದ ಶ್ರೀ ಪ್ರಕಾಶ್ ಶೆಟ್ಟಿ, ದೇವಿಪ್ರಸಾದ್ ನಾಯಕ್ ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.