ಮಂಗಳೂರಿನ ಪ್ರತಿಷ್ಟಿತ ಬೆಸೆಂಟ್ ಮಹಿಳಾ ಕಾಲೇಜು ವತಿಯಿಂದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ
ಮಂಗಳೂರಿನ ಪ್ರತಿಷ್ಟಿತ ಬೆಸೆಂಟ್ ಮಹಿಳಾ ಕಾಲೇಜು ವತಿಯಿಂದ ಬೆಸೆಂಟ್ ಕನ್ನಡ ಮಾಧ್ಯಮವಿದ್ಯಾರ್ಥಿಗಳಿಗೆ ಮತ್ತು ಶಾಲಾ ಸಪೋರ್ಟಿಂಗ್ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯುತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ಬೆಸೆಂಟ್ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ಸತೀಶ್ ಭಟ್ ಮಾತನಾಡಿ, ಈ ಕಾರ್ಯಕ್ರವನ್ನು ಪ್ರಚಾರಕ್ಕಾಗಿ ಮಾಡುವುದಲ್ಲಿ ಇನ್ನುಳಿದವರಿಗೆ ಇದು ಪ್ರೇರಣೆಯಾಗಬೇಕು ಎನ್ನುವು ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಹಣ ಅಂತಸ್ತು, ಅಧಿಕಾರ ಯಾವುದೂ ಸಾಶ್ವತವಲ್ಲ ಆದರೆ ನಾವು ಸಮಾಜಕ್ಕೆ ಮಾಡುವ ಚಿಕ್ಕ ಸಹಾಯ ಸಾಶ್ವತವಾಗಿ ನೆನೆಪಿನಲ್ಲಿಟ್ಟುಕೊಳ್ಳುವಂತಹದ್ದು ಎಂದು ಹೇಳಿದರು.
ಬಳಿಕ ಬೆಸೆಂಟ್ ಮಹಿಳಾ ಕಾಲೇಜಿನ ಸಂಚಾಲಕರು ಹಾಗೂ ವಿಮೆನ್ಸ್ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ದೇವಾನಂದ ಪೈ ಮಾತನಾಡಿ ನಾನು ನಮ್ಮ ಜೀವನದಲ್ಲಿ ಎಲ್ಲವನ್ನು ಸಮಾಜದಿಂದ ಪಡೆದುಕೊಂಡಿದ್ದೇವೆ ಆದರೆ ಸಮಾಜಕ್ಕೆ ನಾವು ಏನನ್ನು ನೀಡಿದ್ದೇವೆ ಎನ್ನುವುದು ಮುಖ್ಯ ಎಂದು ಹೇಳಿದರು. ಇದೇ ವೇಲೆ ಸುಮಾರು 75ರಿಂದ 80 ಫಲಾನುಭವಿಗಳಿಗೆ ಗಣ್ಯರು ಆಹಾರ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭ ಕಾರ್ಯಕ್ರಮದ ಸಂಯೋಜಕ ಗಣೇಶ್ ಪೈ, ಕೊರ್ಡಿನೇಟರ್ ಸೈಯದ್ ಖಾದರ್, ಕಾಲೇಜಿನ ಕಾಮರ್ಸ್ ಆಂಡ್ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥರಾದ ಡಾ.ಪ್ರವೀಣ್ ಕುಮಾರ್.ಕೆ.ಸಿ. ಪ್ರಾಂಶುಪಾಲರಾದ ಡಾ.ಸತೀಶ್ ಕುಮಾರ್ ಶೆಟ್ಟಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು