ಮದುವೆ ನಿಶ್ಚಿತಾರ್ಥವಾಗಿದ್ದ ಈಶ್ವರಮಂಗಲದ ಯುವತಿ ಆತ್ಮಹತ್ಯೆ
ವಿವಾಹ ನಿಶ್ಚಿತಾರ್ಥಗೊಂಡಿದ್ದ 25 ರ ಹರೆಯದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಹೊರವಲಯ ಈಶ್ವರಮಂಗಲ ಸಮೀಪದಿಂದ ವರದಿಯಾಗಿದೆ.
ಕಾಸರಗೋಡು ಜಿಲ್ಲೆಯ ನೆಟ್ಟನಿಗೆ ಗ್ರಾಮದ ಕುಳದಪಾರೆ ಸಮೀಪದ ನಿದಿಯಡ್ಕದ ಸುಬ್ಬಣ್ಣ ನಾಯ್ಕ ಎಂಬವರ ಪುತ್ರಿ ಪ್ರಿಯಾ ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಈಗಾಗಲೇ ವಿವಾಹ ನಿಶ್ಚಿತಾರ್ಥವಾಗಿದ್ದೂ ಕಳೆದ ಮೇ ತಿಂಗಳಿನಲ್ಲಿ ವಿವಾಹಕ್ಕೆ ದಿನಾಂಕ ನಿಗದಿಯಾಗಿತ್ತು . ಲಾಕ್ ಡೌನ್ ಹೇರಲ್ಪಟ್ಟ ಹಿನ್ನಲೆಯಲ್ಲಿ ಮದುವೆ ಮುಂದೂಡಲಾಗಿತ್ತು. ಇವರು ಬಡಗನ್ನೂರು ಸರಕಾರಿ ಹಿರಿಯ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಉದ್ಯೋಗ ನಿರ್ವಹಿಸಿದ್ದು, ಬಳಿಕ ಆ ಕೆಲಸ ತೊರೆದು ಈಶ್ವರಮಂಗಲದ ಫೋಟೋ ಕಾಫಿ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು. ತಾಯಿ ಬೀಡಿ ಬ್ರ್ಯಾಂಚ್ ಗೆ ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪುತ್ತೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.