ಮರವೂರು ಸೇತುವೆ ಕುಸಿತದಿಂದ ಕಂಗೆಟ್ಟ ಸ್ಥಳೀಯರು : ಜಿಲ್ಲಾಡಳಿತದ ವಿರುದ್ಧ ಆಕ್ರೋಶ
ಸೇತುವೆಯೆಂದರೆ ಕೇವಲ ಎರಡು ಊರಿನ ಸಂಪರ್ಕದ ಕೊಂಡಿ ಮಾತ್ರವಲ್ಲ ಎರಡು ಊರಿನ ಜನರ ಸಂಬಂಧದ ಕೊಂಡಿ. ಮರವೂರು ಸೇತುವೆ ಕುಸಿತದಿಂದ ಎರಡು ಊರಿನ ಸಂಪರ್ಕ ಕಳೆದುಕೊಂಡು 3 ವಾರಗಳು ಕಳೆದಿವೆ. ಆದರೆ ಇದರ ದುರಸ್ತಿ ಕಾರ್ಯ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿದೆ ಈ ಬಗ್ಗೆ ಸ್ಪೆಷಲ್ ರಿಪೋರ್ಟ್.
ಮರವೂರು ಸೇತುವೆ ಕುಸಿತವಾಗಿ ಸುಮಾರು 3 ವಾರಗಳು ಕಳೆದಿವೆ. ಸಂಪೂರ್ಣ ಎರಡು ಕಡೆಯ ಸಂಪರ್ಕ ಕಳೆದುಕೊಂಡಿದೆ. ಕಾರಣಗಳ ಕುರಿತು ಮಾತನಾಡುತ್ತಾರೆ. ಆದರೆ ಈ ಕುಸಿತದಿಂದ ಜನರಿಗಾದ ಸಮಸ್ಯೆಯ ಬಗ್ಗೆ ಮಾತನಾಡುವವರು ಯಾರು. ಮಕ್ಕಳು, ವೃದ್ಧರು ದಿನ ನಿತ್ಯ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ ಆದರೂ ದುರಸ್ಥಿ ಕಾರ್ಯ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿರುವುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ನಾಲ್ಕು ದಿನಗಳಿಂದ ದುರಸ್ಥಿ ಕಾರ್ಯ ನಡೆಯುತ್ತಿಲ್ಲ. ಮಂಗಳೂರು ನಗರದಿಂದ ಸೇತುವೆಯ ವರೆಗೆ ಬಸ್ ವ್ಯವಸ್ಥೆ ಇದೆ ಆದರೆ ಸೇತವೆಯ ಇನ್ನೊಂದು ಬದಿಯ ಜನರು ಹೇಗೆ ಹೋಗಬೇಕು, 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗಿದೆ ಮಕ್ಕಳು ಹೋಗುವುದಾದರೂ ಹೇಗೆ ಶಾಲೆಯ ಪ್ರಾಂಶುಪಾಲರಲ್ಲಿ ಹೇಳಿದರೆ ಶಾಲೆ ತೆರೆಯುವುದು ಮಾತ್ರ ನಮ್ಮ ಕೆಲಸ ವಾಹನ ವ್ಯವಸ್ಥೆ ಮಾಡುವುದು ನಮ್ಮ ಕೆಲಸವಲ್ಲ ಎಂದು ಹೇಳುತ್ತಾರೆ. ಅಟೋರಿಕ್ಷಾದ ದರ ಹೆಚ್ಚಾಗಿದೆ. ಬಡ ಜನರು ಏನು ಮಾಡಬೇಕು ಎಂದು ಹೇಳುತ್ತಾರೆ ಸ್ಥಳೀಯರು.
ಇನ್ನೊಂಡೆಗೆ ಉರಿ ಬಿಸಿಲಿನಲ್ಲಿ ನಡೆದುಕೊಂಡು ಬರುತ್ತಿರುವ ವೃದ್ಧರನ್ನು ನೋಡಿದರೆ ಮನ ಕಲಕುತ್ತದೆ. ಯಾಕೆ ಜನ ಪ್ರತಿನಿಧಿಗಳಿಗೆ ಇವರ ಕಷ್ಟ ಅರ್ಥವಾಗುವುದಿಲ್ಲ. ಇಳಿ ವಯಸ್ಸಿನಲ್ಲಿಯೂ ಹತ್ತಾರು ಕಿಲೋ ಮೀಟರ್ ನಡೆದುಕೊಂದು ಹೋಗಿ ಕೆಲಸ ಮಾಡುತ್ತಿದ್ದಾರೆ. ದಿನಾ ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕು, ಸರ್ಕಾರದವರು ಓಟು ಬೇಕಾಗುವಾಗ ಬರುತ್ತಾರೆ ಮತ್ತೆ ನಾವು ಸತ್ತಿದ್ದೇವಾ ಬದುಕುದ್ದೇವಾ ಎನ್ನುವುದನ್ನು ಕೇಳುವುದಿಲ್ಲ. ನಮಗೆ ಏನು ಕೊಡುತ್ತಿಲ್ಲ ಎಲ್ಲಾ ನಮ್ಮ ಕೈಯಿಂದ ಕಿತ್ತುಕೊಳ್ಳುತ್ತಿದ್ದಾರೆ….
ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತಾಗಿರುವ ಜಿಲ್ಲಾಡಳಿತ, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಜನರ ಸಮಸ್ಯೆಯನ್ನು ಆಲಿಸಲಿ ಪರಿಹಾರ ನೀಡಲಿ ಎನ್ನುವುದೇ ನಮ್ಮ ಆಶಯ.