ಮಲಾಡ್ ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ

ಮುಂಬೈ: ಉಪನಗರ ಮಲಾಡ್ ಪೂರ್ವದ ಕುರಾರ್ ವಿ ಲೇಜಿನಲ್ಲಿ ಸುಮಾರು 50 ವರ್ಷಗಳ ಹಿಂದೆ ಕೈವಲ್ಯ ಶ್ರೀ ಪ್ರೇಮಾನಂದ ಸ್ವಾಮೀಜಿ ಸ್ಥಾಪಿಸಿರುವ ಶ್ರೀ ಮೂಕಾಂಬಿಕಾ ದೇವಸ್ಥಾನ ಈ ವರ್ಷ ಪೂರ್ಣ ನವೀಕೃತಗೊಂಡ ಜೀರ್ಣೋದ್ದಾರ ವಾಗಿದೆ. ಶ್ರೀ ಪ್ರೇಮಾನಂದ ಸ್ವಾಮೀಜಿ ಯವರು ಶ್ರದ್ಧಾ ಭಕ್ತಿಯೊಂದಿಗೆ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದರು. ಅದೇ ಧಾರ್ಮಿಕತೆಯ ನಿಯಮದಲ್ಲಿ ಸ್ವಾಮೀಜಿಯವರ ಸುಪುತ್ರ ಶ್ರೀ ವೇದ ನಂದ ಸ್ವಾಮೀಜಿಯವರು ಈ ವರ್ಷ ನವರಾತ್ರಿ ಉತ್ಸವವನ್ನು ಭಕ್ತಿ ಸಂಭ್ರಮದೊಂದಿಗೆ ಆಚರಿಸಿ ಪ್ರತಿ ದಿನ ಅನ್ನಸಂತರ್ಪಣೆಯನ್ನು ಕೂಡ ಆಯೋಜಿಸುತ್ತಾ ಪೂಜೆಯನ್ನು ನಡೆಸಿದ್ದಾರೆ.
ಅ .8ರಿಂದ ಪ್ರಾರಂಭಗೊಂಡು ಅ 15ರವರೆಗೆ ಪ್ರತಿದಿನ ನಿತ್ಯ  ಮೂರು ಹೊತ್ತಿನ ಪೂಜೆ ಅಲ್ಲದೆ. ಅಕ್ಟೋಬರ್ 10ರಂದು ಸಂಜೆ ಲಲಿತ ಸಹಸ್ರನಾಮ ಮಾಂಗಲ್ಯ ಪೂಜೆ ಅಕ್ಟೋಬರ್ 11ರಂದು ಸರಸ್ವತಿ ಪೂಜೆ ಅಕ್ಟೋಬರ್ 12ರಂದು ಲಕ್ಷ್ಮಿ ಪೂಜೆ. ಅಕ್ಟೋಬರ್ 13ರಂದು ಚಂಡಿಕಾಹವನ. ಅಕ್ಟೋಬರ್ 14 ರಂದು ಕನ್ಯಾ ಪೂಜಾ, ಬಾಲ ಭೋಜನ, ಅಕ್ಟೋಬರ್ 15ರಂದು ಬೆಳಿಗ್ಗೆ ಶ್ರೀನಾರಾಯಣಗುರು ಭಜನ ಮಂಡಳಿ ಥಾನೆ ಅವರಿಂದ ಭಜನೆ, ಮಧ್ಯಾಹ್ನ ಮಹಾಮಂಗಳಾರತಿ  ಬಳಿಕ ದರ್ಶನ ಸೇವೆ ನಡೆಯಿತು.
9 ದಿನಗಳ ದಸರಾ ಪೂಜೆ  ಸಂಪನ್ನಗೊಂಡ ಬಳಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ವೇದಾನಂದ ಸ್ವಾಮೀಜಿ  ಭಕ್ತರಿಗೆ ಧಾರ್ಮಿಕ ಪ್ರವಚನವನ್ನು ನೀಡುತ್ತಾ. ಕೊಲ್ಲೂರು ಮೂಕಾಂಬಿಕೆ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಪೂಜಾ ವಿಧಿಗಳು ಈ ಪವಿತ್ರ ಸನ್ನಿಧಿಯಲ್ಲಿ ನಿತ್ಯ ನಡೆಯುತ್ತದೆ.ಪ್ರೇಮಾನಂದ ಸ್ವಾಮೀಜಿಯವರು ನಡೆದುಕೊಂಡ ಹಾದಿಯಲ್ಲಿ ಈ ಕ್ಷೇತ್ರದ ಧಾರ್ಮಿಕ ಕಾರ್ಯಗಳು ನಡೆಯುತ್ತಿದೆ. ಕೊರೋನಾದ ಸಂಕಷ್ಟ ಸಂದರ್ಭದಲ್ಲಿ ಕ್ಷೇತ್ರ ಜೀರ್ಣೋದ್ಧಾರ ಕೆಲಸ ಪ್ರಾರಂಭಗೊಂಡಿತು. ಮೂಕಾಂಬಿಕೆಯ ಅನುಗ್ರಹದಂತೆ ಯಾವುದೇ ರೀತಿಯ ಅಡಚಣೆಗಳಿಲ್ಲದೆ ಬ್ರಹ್ಮಕಲಸ ವಿಜ್ರಂಭಣೆಯಿಂದ ನಡೆದಿದೆ. ನಮ್ಮ ಭಕ್ತಿಯ ಆಡಂಬರದ ಆಗಿರದೆ ಶ್ರದ್ಧೆಯಿಂದ ಇದ್ದಾಗ ಎಲ್ಲಾ ದೇವತಾ ಕಾರ್ಯಗಳು ಸುಲಭವಾಗಿ ನಡೆಯುತ್ತದೆ. ನಮ್ಮೆಲ್ಲರ ಬದುಕು  ಧಾರ್ಮಿಕತೆಯಿಂದ ಕೂಡಿರಬೇಕು ಎಂದು ನುಡಿದರು
ದಸರಾ ಪೂಜೆಯ ಸಂದರ್ಭದಲ್ಲಿ  ಮಲಾಡ್ ಲಕ್ಷ್ಮಣ್ ನಗರದ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ  ಸಾಫಲ್ಯ. ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕೋಶಧಿಕಾರಿ ಜಗನ್ನಾಥ ಮೆಂಡನ್. ಪರಿಸರದ ರಾಜಕೀಯ ನೇತಾರರನ್ನು ಸಮಾಜ ಸೇವಕರನ್ನು ದೇವಸ್ಥಾನದ ವತಿಯಿಂದ ವೇದಾ ನಂದ ಸ್ವಾಮೀಜಿ ಮತ್ತು ಆಡಳಿತ ಸಮಿತಿಯ ಸದಸ್ಯರಾದ ಯೋಗೀಶ್ ಕೋಟ್ಯಾನ್. ಯಾದವ್ ಕೋಟ್ಯಾನ್ ಯವರು ಗೌರವಿಸಿದರು. ದಸರದ ಪ್ರತಿದಿನ ಭಜನೆ ಅನ್ನಸಂತರ್ಪಣೆಯಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ದೀಪಕ್ ಶಾನಭೋಗ, ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು. 
ವರದಿ: ದಿನೇಶ್ ಕುಲಾಲ್ ಮುಂಬೈ

Related Posts

Leave a Reply

Your email address will not be published.