ಮುಂಬೈಯ ಬಿಲ್ಲವರ ಎಸೋಸಿಯೇಶನ್ ವತಿಯಿಂದ ಆಟಿಡೊಂಜಿ ದಿನ

ಮುಂಬೈ :ಬಿಲ್ಲವರ  ಎಸೋಸಿಯೇಶನ್ ಮುಂಬಾಯಿ. ಕಾ0ದಿವಲಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದ  ವತಿಯಿಂದ ಅಗಷ್ಟ್  15 ರಂದು  ಸ್ವಾತಂತ್ರ್ಯ  ದಿನಾಚರಣೆಯ  ದಿನದಂದು ರವಿವಾರ  ಕಾ0ದಿವಲಿಯ  ಸ್ಥಳೀಯ ಕಚೇರಿಯ ಕಾರ್ಯಾಲಯದಲ್ಲಿ  ಆಟಿಡೊ0ಜೆ ಕೂಟ  ಬಹಳ  ವಿಜೃಂಭಣೆಯಿಂದ ಜರಗಿತು. 
ಅಂದಿನ ಕಾರ್ಯಕ್ರಮಕ್ಕೆ ಬಿಲ್ಲವರ ಎಸೋಸಿಯೇಶನಿನ ಉಪಾಧ್ಯಕ್ಷರಾದ ಶಂಕರ್ ಡಿ ಪೂಜಾರಿ, ಪ್ರಧಾನ ಕಚೇರಿಯ ಪ್ರತಿನಿಧಿಯಾದ ಹರೀಶ್ ಪೂಜಾರಿ ಕೋಕರ್ನೆ. ಜೊತೆ ಕೋಶಾಧಿಕಾರಿಯವರಾದ ಸದಾಶಿವ  ಕರ್ಕೇರ, ಯುವ ಅಭ್ಯುದಯದ  ಕಾರ್ಯಧ್ಯಕ್ಸರಾದ  ನಾಗೇಶ್ ಕೋಟ್ಯಾನ್, ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ, ಭಾರತ್ ಕೋಪರೇಟ್ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ  ಜೆ .ಪೂಜಾರಿ, ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಸರಾದ  ಯೋಗೇಶ್ ಕೆ ಹೆಜ್ಮಾಡಿ, ಗೌರವ ಕಾರ್ಯಧರ್ಶಿಯವರಾದ ಉಮೇಶ್ ಸುರತ್ಕಲ್, ಗೌರವ ಕೋಶಾಧಿಕಾರಿಯವರಾದ ರಮೇಶ ಬಂಗೇರ್ , ಕಾರ್ಯಕರ್ತರಾದ  ಜೆ ಎಮ್ ಕೋಟ್ಯಾನ್, ಜಯರಾಮ  ಪೂಜಾರಿ , ಜೊತೆ ಕಾರ್ಯಧರ್ಶಿಯವರಾದ  ಸಬಿತಾ ಜಿ ಪೂಜಾರಿ, ಕಾರ್ಯಕರ್ತೆಯವರಾದ ವಾರಿಜ ಶೇಖರ್ ಕರ್ಕೇರ, ಶುಭ ಸುವರ್ಣ, ಯಮುನ  ಬಿ ಸಾಲಿಯಾನ್, ವಿದ್ಯಾ ಅಮೀನ್, ಸುಜಾತ  ಪೂಜಾರಿ ಯವರು ಧೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
 ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದ ಶಂಕರ್ ಡಿ .ಪೂಜಾರಿ, ಗಂಗಾಧರ್ ಜೆ .ಪೂಜಾರಿ, ನಾಗೇಶ್ ಕೋಟ್ಯಾನ್, ಸದಾಶಿವ  ಕರ್ಕೇರ, ಹರೀಶ್ ಪೂಜಾರಿ ಕೋಕರ್ನೆ,  ವಾರಿಜ ಎಸ್ ಕರ್ಕೇರ, ಆಟಿದ ದಿನಾಚರಣೆಯ  ಕುರಿತಾಗಿ ತಮ್ಮ  ಅನಿಸಿಕೆಗಳನ್ನು  ವ್ಯಕ್ತಪಡಿಸಿ  ಮಹಿಳೆಯರಿಗೆಲ್ಲಾ ಶುಭ ಹಾರೈಸಿದರು.  ಕಾ0ದಿವಲಿಯ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಸರಾದ ಯೋಗೇಶ್ ಕೆ ಹೆಜ್ಮಾಡಿಯವರು ಮಹಿಳೆಯರಿಗೆಲ್ಲಾ ಶುಭಕೋರಿ ಕಾ0ದಿವಲಿಯ  ಸ್ಥಳೀಯ ಕಚೇರಿಯ ಮಾಡುವಂತಹ ಕಾರ್ಯಕ್ರಮಗಳಿಗೆ ಮಹಿಳೆಯರ  ಸಹಕಾರ  ಅತೀ ಹೆಚ್ಚು. ಎಲ್ಲಾ  ಕಾರ್ಯಕ್ರಮಕ್ಕೆ ನಮ್ಮೊಂದಿಗೆ ಸಹಕರಿಸುತ್ತಾರೆ. ನಮ್ಮ ಸ್ಥಳೀಯ ಮಾಜಿ ಕಾರ್ಯಾಧ್ಯಕ್ಷ,   ಗಂಗಾಧರ ಪೂಜಾರಿಯವರ ಸಂಪೂರ್ಣ  ಸಹಕಾರ  ಅವರ ಮಾರ್ಗದರ್ಶನ    ಹಾಗೂ ಜಯ ಸಿ.ಸುವರ್ಣ ರವರ ನುಡಿಯಂತೆ ನಾವೆಲ್ಲಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದೇವೆ ಎ0ದು ಹೇಳಿದರು. ಕಾರ್ಯಕ್ರಮದಲ್ಲಿ ಮಹಿಳೆಯರು  ಮನೆಯಲ್ಲಿ ಮಾಡಿಕೊಂಡು  ತಂದಂತ ವಿವಿಧ  ಸ್ವಾದಿಷ್ಟ ಪಲ್ಯ  ಪದಾರ್ಥವನ್ನು ಪಾಲ್ಗೊಂಡ ಎಲ್ಲರಿಗೂ ನೀಡಲಾಯಿತು. 
ಸ್ಥಳೀಯ ಕಚೇರಿಯ  ಗೌರವ  ಕಾರ್ಯಧರ್ಶಿಯವರಾದ  ಉಮೇಶ್ ಎನ್ ಸುರತ್ಕಲ್  ಧನ್ಯವಾದವನ್ನು ಅರ್ಪಿಸಿದರು.
ಚಿತ್ರ-ವರದಿ ದಿನೇಶ್ ಕುಲಾಲ್

Related Posts

Leave a Reply

Your email address will not be published.