ಮೂಡುಬಿದಿರೆ: 6ನೇ ವರ್ಷದ ಕಂಬಳ ಓಟಗಾರ ತರಬೇತಿ ಶಿಬಿರ ಉದ್ಘಾಟನೆ
ಮೂಡುಬಿದಿರೆ: ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿ ಹೊಂದಿರುವ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಮೂಡುಬಿದಿರೆ ಒಂಟಿಕಟ್ಟೆಯಲ್ಲಿರುವ ವೀರ ರಾಣಿ ಅಬ್ಬಕ್ಕ ಸಂಸ್ಕøತಿ ಗ್ರಾಮದ ಕೋಟಿ-ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ 15 ದಿನಗಳು ನಡೆಯುವ 6ನೇ ವರ್ಷದ ಕಂಬಳ ಓಟಗಾರ ತರಬೇತಿ ಶಿಬಿರಕ್ಕೆ ಭಾನುವಾರ ಕಡಲಕೆರೆಯ ಸೃಷ್ಟಿ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಮಾಜಿ ಸಚಿವ, ಮೂಡುಬಿದಿರೆ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಅಭಯಚಂದ್ರ ಜೈನ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಕಂಬಳಕ್ಕೆ ಒಲಿಂಪಿಕ್ಸ್ ಶಿಸ್ತಿನ ಪರಿಕಲ್ಪನೆಯನ್ನು ಅಕಾಡೆಮಿಕ್ ಆಗಿ ನೀಡಲು ಪರಿಶ್ರಮಿಸುತ್ತಿರುವ ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ ಹಾಗೂ ಅವರ ತಂಡದ ಸೇವೆ ಶ್ಲಾಘನೀಯ ಎಂದರು.
ಆದಾನಿ ಗ್ರೂಪ್ನ ಆಡಳಿತ ನಿರ್ದೇಶಕ ಕಿಶೋರ್ ಆಳ್ವ ಅಧ್ಯಕ್ಷತೆವಹಿಸಿದರು. ಮೂಡುಬಿದಿರೆಯಲ್ಲಿ ಕಂಬಳದ ಅಧ್ಯಯನ, ವಸ್ತುಸಂಗ್ರಹಾಲಯ, ತರಬೇತಿ ಸಹಿತ ಸಮಗ್ರ ವ್ಯವಸ್ಥೆಗಳೊಂದಿಗೆ ಕಂಬಳವನ್ನು ವಿಶ್ವಕ್ಕೆ ಪರಿಚಯಿಸುವ `ಕಂಬಳ ಲೋಕ’ ಸ್ಥಾಪನೆಯಾಗಬೇಕಾಗಿದೆ. ಅದಾನಿ ಸಂಸ್ಥೆಯ ಮೂಲಕ ರೂ. 50 ಲಕ್ಷದ ಕೊಡುಗೆ ನೀಡುವೆ ಎಂದು ಪ್ರಕಟಿಸಿದರು.
ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಕಂಬಳ ಯಜಮಾನರಾದ ನಂದಳಿಕೆ ಶ್ರೀಕಾಂತ ಭಟ್, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಸಿದ್ದಕಟ್ಟೆ ಪೆÇಡುಂಬ ಸಂದೇಶ ಶೆಟ್ಟಿ, ರಾಷ್ಟ್ರೀಯ ತರಬೇತುದಾರರಾದ ವಸಂತ ಜೋಗಿ, ಶಾಂತರಾಮ್, ತೀರ್ಪುಗಾರ ನವೀನ್ಚಂದ್ರ ಅಂಬೂರಿ, ಶಿಬಿರಾಧಿಕಾರಿ, ಕಂಬಳದ ಸವ್ಯಸಾಚಿ ಸರಪಾಡಿಯ ಜೋನ್ ಸಿರಿಲ್ ಡಿ’ಸೋಜ ಭಾಗವಹಿಸಿದರು.