ಯೆನೆಪೋಯ ಹಾಗೂ ಆವಿಷ್ಕಾರ ಯೋಗ ಸಹಯೋಗ :ವರ್ಚುವಲ್ ಯೋಗಾಭ್ಯಾಸ ಮತ್ತು ಅತಿಥಿ ಉಪನ್ಯಾಸ
ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಹಾಗೂ ಆವಿಷ್ಕಾರ ಯೋಗ ಸಹಯೋಗದಲ್ಲಿ ಜೂನ್ 21, ಸೋಮವಾರ ಬೆಳಿಗ್ಗೆ 6.30ರಿಂದ 7.30ರ ವರೆಗೆ ಯೋಗದಿನದ ಶಿಷ್ಟಾಚಾರದ ಯೋಗಭ್ಯಾಸವು ಅಂತರ್‌ಜಾಲ ಯೂಟ್ಯೂಬ್ ಲಿಂಕ್ https://youtu.be/-oW5zomdYCA ಹಾಗೂ ವಿ4 ನ್ಯೂಸ್‌ನ ಮೂಲಕ ನೇರಪ್ರಸಾರದೊಂದಿಗೆ ವರ್ಚುವಲ್ ಯೋಗಾಭ್ಯಾಸ ನಡೆಯಲಿದೆ. ಯೋಗ ಗುರು ಕುಶಾಲಪ್ಪ ಗೌಡ ಇವರು ಯೋಗಾಭ್ಯಾಸದ ತರಬೇತಿ ನಡೆಸಿಕೊಡಲಿದ್ದಾರೆ.
ಯೋಗ ಅತಿಥಿ ಉಪನ್ಯಾಸ: ಯೇನೆಪೋಯ ವಿಶ್ವವಿದ್ಯಾಲಯದ ವತಿಯಿಂದ ಬೆಳಿಗ್ಗೆ 10.೦೦ ಗಂಟೆಗೆ ಯೋಗದಿನದ ಸಭಾ ಕಾರ್ಯಕ್ರಮ ಹಾಗೂ ಆಧುನಿಕ ಜೀವನದಲ್ಲಿ ಯೋಗ ವಿಜ್ಞಾನದ ಪಾತ್ರ ಎಂಬ ವಿಷಯದಲ್ಲಿ ಪ್ರೊ. ಡಾ| ಕೆ. ಕೃಷ್ಣ ಭಟ್, ನಿವೃತ್ತ ಹಾಗೂ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರು, ಮಾನವ ಪ್ರಜ್ಞೆ ಹಾಗೂ ಯೋಗ ವಿಜ್ಞಾನ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ ಇವರು ಅತಿಥಿ ಉಪನ್ಯಾಸ ನೀಡಲಿರುವರು. ಪ್ರೊ. ಡಾ| ಎಸ್. ಚಂದ್ರಶೇಖರ ಶೆಟ್ಟಿ ಗೌರವಾನ್ವಿತ ಉಪಕುಲಪತಿ, ಆದಿಚುಂಚನಗಿರಿ ಮಹಾವಿದ್ಯಾಲಯ, ಮಂಡ್ಯ, ಗೌರವ ಅತಿಥಿಯಾಗಿ ಭಾಗವಹಿಸುವರು. ಪ್ರೊ. ಡಾ| ಎಂ. ವಿಜಯ ಕುಮಾರ್, ಗೌರವಾನ್ವಿತ ಉಪಕುಲಪತಿ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಅಧ್ಯಕ್ಷತೆ ವಹಿಸಲಿರುವರು.
ಕಾರ್ಯಕ್ರಮವು ಮೀಟ್‌ಗೂಗಲ್ https://meet.google.com/zuh-eeyq-sxs ಹಾಗೂ https://youtu.be/qCPByvQki-Q ಯೆನೆಪೋಯ ಯೂಟ್ಯೂಬ್‌ನಲ್ಲಿ ನೇರಪ್ರಸಾರವಾಗಲಿದೆ. ಎರಡೂ ಕಾರ್ಯಕ್ರಮಕ್ಕೂ ಸಾರ್ವಜನಿಕರಿಗೆ ಉಚಿತ ಪ್ರವೇಶವಿರುವುದು. ಮಾಹಿತಿಗೆ ಯೋಗ ತರಬೇತುದಾರ ಕುಶಾಲಪ್ಪ ಜಿ.ಯನ್., ಸಂಪರ್ಕ: 9845588740