ರಸ್ತೆ ಬದಿಯ ಗಿಡಗಳನ್ನು ಕಿತ್ತೆಸೆದ ದುಷ್ಕರ್ಮಿಗಳು : ಅರಣ್ಯ ಹಾಗೂ ಪೊಲೀಸರಿಗೆ ದೂರು
ಪರಿಸರ ಪ್ರೇಮಿಯೋರ್ವರು ಸಾರ್ವಜನಿಕವಾಗಿ ರಸ್ತೆ ಬದಿಯಲ್ಲಿ ನೆಟ್ಟಿರುವ ಗಿಡಗಳನ್ನು ದುಷ್ಕರ್ಮಿಗಳು ಕಿತ್ತೆಸೆದ ಘಟನೆ ಬಡಗಕಜೆಕಾರು ಗ್ರಾಮದ ದೆತ್ತಿಮಾರು ಎಂಬಲ್ಲಿ ಸಂಭವಿಸಿದ್ದು, ಈ ಬಗ್ಗೆ ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ.
ಇನ್ನು ರಾತೋರಾತ್ರಿ ಸ್ಥಳೀಯ ಐವರು ವ್ಯಕ್ತಿಗಳು ಕಿತ್ತೆಸೆದು ಧ್ವಂಸಗೊಳಿಸಿರುವುದಾಗಿ ಮಾರ್ಕ್ ಸೇರಾ ಅವರು ದೂರು ನೀಡಿದ್ದಾರೆ. ನೆಟ್ಟ ಗಿಡಗಳನ್ನು ಕಿತ್ತು ಬಿಸಾಕಿದ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖಂಡನೆ ವ್ಯಕ್ತವಾಗಿದೆ. ಸಿಸಿ ಕ್ಯಾಮರದಲ್ಲಿ ಸೆರೆಯಾಗಿರುವ ಗಿಡ ಕಿತ್ತೆಸೆಯುವ ದೃಶ್ಯದ ಪೂಟೇಜನ್ನು ದೂರಿನಲ್ಲಿ ಅಡಕಮಾಡಿದ್ದು,ಈ ದುಷ್ಕರ್ಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.