ರಿಗ್ ಮಾಲೀಕರ ಮತ್ತು ಕಂಟ್ರಾಕ್ಟ್‌ದಾರರ ಸಭೆ
ದಕ್ಷಿಣ ಕನ್ನಡ ಮತ್ತು ಉಡುಪಿ ರಿಗ್ ಮಾಲೀಕರ ಮತ್ತು ಕಂಟ್ರಾಕ್ಟ್ದಾರರ ಸಂಘ ರಿಜಿಸ್ಟರ್ಡ್ ಮಂಗಳೂರು ವತಿಯಿಂದ ತಮಿಳುನಾಡು ರಿಗ್ ಮಾಲೀಕರ ಸಂಘದ ಪ್ರತಿನಿಧಿಗಳ ಜೊತೆ ಇಂದು ಮಂಗಳೂರಿನಲ್ಲಿ ಸಭೆ ನಡೆದಿದೆ.
ಸಭೆಯಲ್ಲಿ ಡ್ರಿಲ್ಲಿಂಗ್ ದರ ಹೆಚ್ಚಳದ ಕುರಿತಾಗಿ ಚರ್ಚಿಸಿ, ಹೆಚ್ಚಾಗಿರುವ ಇಂಧನ ಬೆಲೆಗೆ ಅನುಗುಣವಾಗಿ ಡ್ರಿಲ್ಲಿಂಗ್ ದರವನ್ನು ನಿಗಧಿಪಡಿಲಾಗಿದೆ. ಒಂದು ಅಡಿ ಡ್ರಿಲ್ಲಿಂಗ್‌ಗೆ ಈ ಮೊದಲು 115 ರೂಪಾಯಿ ಇತ್ತು, ಈಗ ಈ ದರ 130 ಆಗಿದ್ದು, ಇದ್ರ ಜೊತೆಗೆ ಕಬ್ಬಿಣದ ದರ ಹೆಚ್ಚಳ ಅನ್ವಯ ಕೇಸಿಂಗ್ ಪೈಪ್ ದರವನ್ನೂ ಪರಿಸ್ಕರಿಸಲಾಗಿದ್ದು ಕೊಳವೆ ಬಾವಿ ಮಾಡಿಸುವ ರೈತರು ಸಹರಿಸುವಂತೆ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಆರ್ ಶೆಟ್ಟಿ ಮನವಿ ಮಾಡಿದ್ದಾರೆ. ಸಭೆಯು ಯಮುನ ಡ್ರಿಲ್ಲಿಂಗ್ ಎಂಟರ್ ಪ್ರೈಸಸ್ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ರಿಗ್ ಮಾಲೀಕರ ಮತ್ತು ಕಂಟ್ರಾಕ್ಟ್ದಾರರ ಸಂಘ ರಿ ಇದರ ಅಧ್ಯಕ್ಷರಾದ ಪುರುಷೋತ್ತಮ ಆರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕೃಷ್ಣರಾಜ್ ಬಿ. ರಾಜ್ ಬೋರ್ವೆಲ್ಸ್, ಕಾವ್ಯಾ ಶೆಟ್ಟಿ ಯಮುನಾ ಬೋರ್ವೆಲ್ಸ್, ಕೃಷ್ಣಪ್ಪ ವಿಘ್ನೇಶ್ವರ ಬೋರ್ವೆಲ್ಸ್ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.